For the best experience, open
https://m.newskannada.com
on your mobile browser.
Advertisement

ಬೇಸಿಗೆಯಲ್ಲಿ ದಾಳಿಂಬೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆಯಲ್ಲಿ ದಾಳಿಂಬೆ ಹಣ್ಣನ್ನು ಹೆಚ್ಚು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಇದು ನಮ್ಮ ಆರೋಗ್ಯಕ್ಕೆ ಪೋಷಕ ಶಕ್ತಿಯನ್ನು ನೀಡುವುದರಿಂದ ಜತೆಗೆ ದಾಹ ನೀಗಿಸುವುದರಿಂದ ಹಲವು ಉಪಯೋಗಗಳನ್ನು ಪಡೆಯಲು ಸಾಧ್ಯವಾಗಲಿದೆ. ಇದು ಸೇವಿಸಲು ರುಚಿಕರವಾಗಿರುವುದರಿಂದ ನೇರವಾಗಿ ಸೇವಿಸಬಹುದಲ್ಲದೆ, ಜ್ಯೂಸ್ ಮಾಡಿಯೂ ಕುಡಿಯಬಹುದು.
04:09 PM May 02, 2024 IST | Ashika S
ಬೇಸಿಗೆಯಲ್ಲಿ ದಾಳಿಂಬೆ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆಯಲ್ಲಿ ದಾಳಿಂಬೆ ಹಣ್ಣನ್ನು ಹೆಚ್ಚು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಇದು ನಮ್ಮ ಆರೋಗ್ಯಕ್ಕೆ ಪೋಷಕ ಶಕ್ತಿಯನ್ನು ನೀಡುವುದರಿಂದ ಜತೆಗೆ ದಾಹ ನೀಗಿಸುವುದರಿಂದ ಹಲವು ಉಪಯೋಗಗಳನ್ನು ಪಡೆಯಲು ಸಾಧ್ಯವಾಗಲಿದೆ. ಇದು ಸೇವಿಸಲು ರುಚಿಕರವಾಗಿರುವುದರಿಂದ ನೇರವಾಗಿ ಸೇವಿಸಬಹುದಲ್ಲದೆ, ಜ್ಯೂಸ್ ಮಾಡಿಯೂ ಕುಡಿಯಬಹುದು.

Advertisement

ದಾಳಿಂಬೆಯಲ್ಲಿ ಹಲವು ಬಗೆಯ ಔಷಧೀಯ ಗುಣಗಳಿರುವುದರಿಂದ ಇದನ್ನು ಸೇವಿಸುತ್ತಾ ಬಂದರೆ ಆರೋಗ್ಯದಲ್ಲಿ ವೃದ್ಧಿ ಕಾಣಲು ಸಾಧ್ಯವಾಗಲಿದೆ. ಇನ್ನು ಇದರಲ್ಲಿನ ಔಷಧೀಯ ಗುಣಗಳು ಹಲವು ಕಾಯಿಲೆಗಳಿಗೂ ರಾಮಬಾಣವಾಗಿದೆ.

ದಾಳಿಂಬೆ ರಸವನ್ನು ಸೇವಿಸುವುದರಿಂದ ಅಮಶಂಕೆಯನ್ನು ತಡೆಯಬಹುದಾಗಿದೆ. ಗಿಡದ ತೊಗಟೆಯ ಕಷಾಯಕ್ಕೆ ಚಿಟಿಕೆ ಉಪ್ಪು ಬೆರೆಸಿ ಮುಕ್ಕಳಿಸಿದರೆ ಹಲ್ಲು ನೋವು ಕಡಿಮೆಯಾಗುತ್ತದೆ. ಗಿಡದ ಚಿಗುರು ಎಲೆಗಳನ್ನು ಬಾಯಲ್ಲಿ ಹಾಕಿಕೊಂಡು ಅಗೆಯುವುದರಿಂದ ವಸಡಿನಿಂದ ರಕ್ತ ಬರುವುದನ್ನು ತಡೆಯಲು ಸಾಧ್ಯವಿದೆ.

Advertisement

ಹಣ್ಣನ್ನು ಸೇವಿಸಿದ ಬಳಿಕ ಅದರ ಸಿಪ್ಪೆಯನ್ನು ಎಸೆಯದೆ ಅದಕ್ಕೆ ಸ್ವಲ್ಪ ಕರಿಮೆಣಸು, ಉಪ್ಪು ಬೆರೆಸಿ ನುಣ್ಣಗೆ ಪುಡಿ ಮಾಡಿ ಆ ಪುಡಿಯಿಂದ ಹಲ್ಲು ಉಜ್ಜಿದರೆ ಹಲ್ಲು ಹೊಳಪು ಬರುತ್ತದೆ. ಜತೆಗೆ ದೃಢತ್ವ ಪಡೆಯುತ್ತದೆ. ಹಣ್ಣಿನಲ್ಲಿ ವಿಷಮ ಶೀತ ಜ್ವರ, ಅಸ್ತಮಾ, ಮಾನಸಿಕ ಒತ್ತಡ ಹಾಗೂ ನರಗಳ ದೌರ್ಬಲ್ಯದಿಂದ ಉಂಟಾಗುವ ತಲೆನೋವನ್ನು ಕಡಿಮೆ ಮಾಡುವ ಶಕ್ತಿಯಿದೆ. ಜತೆಗೆ ಪಿತ್ತಶಮನ ಗುಣ ಹೊಂದಿದ್ದು, ಬಾಯಾರಿಕೆಯನ್ನು ನೀಗಿಸುವಲ್ಲಿ ಮತ್ತು ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಕಾರಿಯಾಗಿದೆ.

ದಾಳಿಂಬೆ ರಸದೊಂದಿಗೆ ಅಷ್ಟೇ ಪ್ರಮಾಣದ ಜೇನು ಬೆರೆಸಿ ಸೇವಿಸಿದ್ದೇ ಆದಲ್ಲಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬೇಸಿಗೆ ದಿನಗಳಲ್ಲಿ ಆಗಾಗ್ಗೆ ಆಗುವ ಬಾಯಾರಿಕೆ ತಡೆಗೆ ದಾಳಿಂಬೆ ರಸದಿಂದ ಮಾಡಿದ ಪಾನೀಯ ಉತ್ತಮವಾಗಿದೆ. ದಾಳಿಂಬೆ ಹಣ್ಣಿನ ಬೀಜದಲ್ಲಿ ಜಠರೋತ್ತೇಜಕ ಗುಣವಿದ್ದು, ಬೀಜದ ಪುಡಿಯೊಂದಿಗೆ ಸ್ವಲ್ಪ ಜೇನು ಸೇರಿಸಿ ಸೇವಿಸಿದರೆ ಅತಿಸಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಮೂತ್ರಕೋಶದ ಮತ್ತು ಮೂತ್ರ ಜನಕಾಂಗಗಳಲ್ಲಿ ಸಿಕ್ಕಿ ಹಾಕಿಕೊಂಡ ಕಲ್ಲುಗಳನ್ನು ಕರಗಿಸಲು ಒಂದು ಚಮಚದಷ್ಟು ಹಣ್ಣಿನ ಬೀಜಗಳನ್ನು ತೆಗೆದುಕೊಂಡು ಚೆನ್ನಾಗಿ ಅರೆದು ನಂತರ ಒಂದು ಲೋಟದ ತುಂಬಾ ಹುರುಳಿ ಕಾಳಿನ ಸೂಪ್ಅನ್ನು ತೆಗೆದುಕೊಂಡು ಎರಡನ್ನು ಬೆರೆಸಿ ಕುಡಿಯಬಹುದು.

Advertisement
Tags :
Advertisement