ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಲು ಈ ಆಹಾರಗಳನ್ನು ಸೇವಿಸಿ

ಚಳಿಗಾಲ ಶುರುವಾಗಿದ್ದು, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
04:46 PM Nov 21, 2023 IST | Ramya Bolantoor

ಚಳಿಗಾಲ ಶುರುವಾಗಿದ್ದು, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮನೆಯಲ್ಲಿರುವ ವಸ್ತುಗಳಿಂದಲೇ ಚಳಿಗಾಲಕ್ಕೆ ಮದ್ದು ಮಾಡಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ಎಷ್ಟು  ಜಾಗ್ರತೆ ವಹಿಸಿದರು   ಒಂದು ಸಮಯದಲ್ಲಿ ಶೀತ ಸೋಂಕು ಎದುರಾಗುತ್ತದೆ. ಜೊತೆಗೆ ಚಳಿಗಾಲದಲ್ಲಿ ಎಂತಹ ಆಹಾರ ಸೇವನೆ ಮಾಡಬೇಕು ಎಂಬುದನ್ನು ತಿಳಿದಿರಬೇಕು. ಇದು ಬೆಚ್ಚಗೆ ಇಡುತ್ತದೆ. ಮತ್ತು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

Advertisement

ಕೆಲವೊಮ್ಮೆ ಹಳೆಯ ಗಾಯಗಳು, ಮೂಳೆಗಳ ನೋವು ಸಹ ಚಳಿಗಾಲದ ತಂಪು ವಾತಾವರಣದಲ್ಲಿ ಬಾಧಿಸುತ್ತದೆ. ಸಂಧಿವಾತ ಪ್ರಮುಖ ಸಮಸ್ಯೆ ಆಗಿದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸಲು ದುಬಾರಿ ಆಯ್ಕೆಗಳ ಬದಲಿಗೆ, ಮನೆಮದ್ದು ಮತ್ತು ಆಹಾರ ಆಯ್ಕೆ ಮಾಡಬೇಕು. ಈ ಪರಿಹಾರವು ಚಳಿಗಾಲದಲ್ಲಿ ಶೀತವನ್ನು ನಿವಾರಿಸುತ್ತದೆ.

ತರಕಾರಿಗಳಿಂದ ಸಮೃದ್ಧ ಮತ್ತು ಬೇಳೆಕಾಳು, ಧಾನ್ಯ ಅಥವಾ ಇತರ ಯಾವುದೇ ಅರೆ ದ್ರವದಿಂದ ತಯಾರಿಸಿದ ಸೂಪ್‌ ಸೇವನೆ ಮಾಡುವುದು ಉತ್ತಮ.

Advertisement

ಸೂಪ್ ಒಳಗೆ ಒಂದು ಪಿಂಚ್ ಉಪ್ಪು, ಮೆಣಸು, ದಾಲ್ಚಿನ್ನಿ ಮತ್ತು ಇತರ ಮಸಾಲೆ ಸೇರಿಸಿ. ಇದು ದೇಹ ಬೆಚ್ಚಗೆ ಇರಿಸಲು ಸಹಾಯ ಮಾಡುತ್ತದೆ.

ಕೆಮ್ಮು ಮತ್ತು ಶೀತಕ್ಕೆ ಅತ್ಯಂತ ಪರಿಣಾಮಕಾರಿ ಮೂಲಿಕೆ ಅಂದ್ರೆ ಶುಂಠಿ. ಇದು ರಕ್ತದ ಹರಿವು ಹೆಚ್ಚಿಸುತ್ತದೆ. ದೇಹವನ್ನು ಬೆಚ್ಚಗೆ ಇರಿಸುತ್ತದೆ. ಇದನ್ನು ಚಹಾದಲ್ಲಿ ಗಿಡಮೂಲಿಕೆಯಾಗಿ ಅಥವಾ ನೀರಿನಲ್ಲಿ ಕುದಿಸಿ ಸೇವನೆ ಮಾಡಿದರೆ ಗಂಟಲಿನ ಸೋಂಕಿನಿಂದ ಪರಿಹಾರ ಸಿಗುತ್ತದೆ.

ಒಣ ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾಗಿದ್ದು ಮತ್ತು ದೇಹದ ಉಷ್ಣತೆ ಹೆಚ್ಚಿಸುತ್ತದೆ. ಒಣ ಹಣ್ಣುಗಳನ್ನು ಕಡಿಮೆ ಪ್ರಮಾಣದಲ್ಲಿ ತಿಂದರೆ ಹೆಚ್ಚಿನ ಶಕ್ತಿ ಸಿಗುತ್ತದೆ. ಕೆಲವು ಒಣ ಹಣ್ಣುಗಳು ಕಬ್ಬಿಣ ಒದಗಿಸುತ್ತವೆ. ಮತ್ತು ಯಾವುದೇ ಋತುವಿನಲ್ಲಿ ಸೇವಿಸಲು ಉತ್ತಮ ಆಗಿದೆ.
ಬೆಲ್ಲದಲ್ಲಿ ಕಬ್ಬಿಣದ ಅಂಶವಿರುವುದರಿಂದ ಜೀರ್ಣಾಂಗ ವ್ಯವಸ್ಥೆ ಆಗುತ್ತದೆ. ದೇಹದ ಶಾಖ ಉಳಿಸಿಕೊಳ್ಳುತ್ತದೆ. ಇದು ಮಲಬದ್ಧತೆ ನಿವಾರಿಸುತ್ತದೆ. ಮತ್ತು ಚಯಾಪಚಯ ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಪ್ರತಿದಿನವೂ ಊಟದ ನಂತರ ಸ್ವಲ್ಪ ಪ್ರಮಾಣದ ಬೆಲ್ಲ ಸೇವಿಸುವುದು ಉತ್ತಮ.

Advertisement
Tags :
HEALTHLatestNewsNewsKannadatipsWINTER
Advertisement
Next Article