ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

1,000 ಜನರನ್ನು ಲೇ ಆಫ್ ಮಾಡಲಿರುವ ಇಕಾಮರ್ಸ್ ಸಂಸ್ಥೆ ಇಬೇ

ಅಮೆರಿಕದ ಇಕಾಮರ್ಸ್ ಪ್ಲಾಟ್​ಫಾರ್ಮ್ ಇಬೇ ಸಂಸ್ಥೆ ದೊಡ್ಡ ಮಟ್ಟದಲ್ಲಿ ಲೇ ಆಫ್​ ಮಾಡುತ್ತಿದ್ದು,  ಶೇ. 9ರಷ್ಟು ಪೂರ್ಣಾವಧಿ ಉದ್ಯೋಗಿಗಳನ್ನು  ಕೆಲಸದಿಂದ ತೆಗೆದುಹಾಕುವುದಾಗಿ ಇಬೇ ಸಂಸ್ಥೆ ಹೇಳಿದೆ. ಸುಮಾರು 1,000 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
01:52 PM Jan 24, 2024 IST | Ashika S

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಇಕಾಮರ್ಸ್ ಪ್ಲಾಟ್​ಫಾರ್ಮ್ ಇಬೇ ಸಂಸ್ಥೆ ದೊಡ್ಡ ಮಟ್ಟದಲ್ಲಿ ಲೇ ಆಫ್​ ಮಾಡುತ್ತಿದ್ದು,  ಶೇ. 9ರಷ್ಟು ಪೂರ್ಣಾವಧಿ ಉದ್ಯೋಗಿಗಳನ್ನು  ಕೆಲಸದಿಂದ ತೆಗೆದುಹಾಕುವುದಾಗಿ ಇಬೇ ಸಂಸ್ಥೆ ಹೇಳಿದೆ. ಸುಮಾರು 1,000 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

Advertisement

ಇದು ಪೂರ್ಣಾವಧಿ ಉದ್ಯೋಗಿಗಳಿಗೆ ಬಂದಿರುವ ಆಪತ್ತು ಮಾತ್ರವಲ್ಲ, ಗುತ್ತಿಗೆ ಆಧಾರಿತವಾಗಿ ಕೆಲಸದಲ್ಲಿರುವ  ಉದ್ಯೋಗಿಗಳಿಗೂ ಆಪತ್ತಿದೆ.

ಅಷ್ಟಕ್ಕೂ ಇ ಬೇ ಸಂಸ್ಥೆ ಕಳೆದ ತ್ರೈಮಾಸಿಕ ಅವಧಿಯಲ್ಲಿ 1.3 ಬಿಲಿಯನ್ ಡಾಲರ್​ನಷ್ಟು ಲಾಭ ಮಾಡಿದೆ. ಆದರೂ ಕೂಡ ಲೇ ಆಫ್​ಗೆ ಕೈ ಹಾಕಿದೆ.

Advertisement

ಲೇ ಆಫ್ ಪ್ರಕ್ರಿಯೆಯ ಭಾಗವಾಗಿ ಅಗತ್ಯ ಸಂವಹನಕ್ಕೆ ಬೇಕಾದ ಪೂರಕ ವಾತಾವರಣ ಇರುವುದು ಅಗತ್ಯ. ಅದಕ್ಕಾಗಿ ಇಬೆ ಸಂಸ್ಥೆ ಇಂದು ಬುಧವಾರ ಅಮೆರಿಕದ ಎಲ್ಲಾ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಮ್ ಮಾಡಲು ತಿಳಿಸಿದೆ.

ಝೂಮ್ ಟೀಮ್ ಮೀಟಿಂಗ್ ವೇಳೆ ಲೇ ಆಫ್ ಮಾಡಲಾಗುತ್ತಿರುವ ವಿಷಯವನ್ನು ಮ್ಯಾನೇಜರುಗಳು ಉದ್ಯೋಗಿಗಳಿಗೆ ತಿಳಿಸಲಿದ್ದಾರೆ. ಲೇ ಆಫ್ ಪ್ರಕ್ರಿಯೆ ಮುಗಿದ ಬಳಿಕ ಉದ್ಯೋಗಿಗಳಿಗೆ ಸೂಚನೆ ಹೋಗಲಿದೆ ಎಂದು ಇಬೇ ಸಿಇಒ ಮತ್ತು ಅಧ್ಯಕ್ಷ ಜೇಮೀ ಅಯಾನ್ನೋನೆ ಹೇಳಿದ್ದಾರೆ.

Advertisement
Tags :
LatetsNewsNewsKannadaಅಮೆರಿಕಇಕಾಮರ್ಸ್ಇಬೇಪ್ಲಾಟ್‌ಫಾರ್ಮ್‌
Advertisement
Next Article