For the best experience, open
https://m.newskannada.com
on your mobile browser.
Advertisement

ಫೈಟರ್ ಜೆಟ್‌ ವಿಮಾನಗಳ ಖರೀದಿಗೆ ಎಚ್‌ಎಎಲ್‌ ಗೆ ವಾಯುಸೇನೆ ಟೆಂಡರ್

ನವದೆಹಲಿ: ಚೀನಾದೊಂದಿಗೆ ದಿನೇ ದಿನೇ ಸಂಘರ್ಷದ ವಾತಾವರಣ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವಾಯುಪಡೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು 12 ಸುಧಾರಿತ Su-30MKI ಫೈಟರ್ ಜೆಟ್‌ಗಳ ಖರೀದಿಗೆ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಜೆಟ್ ವಿಮಾನ ಖರೀದಿ ಟೆಂಡರ್ ನೀಡಿದೆ.
09:38 PM Nov 21, 2023 IST | Umesha HS
ಫೈಟರ್ ಜೆಟ್‌ ವಿಮಾನಗಳ ಖರೀದಿಗೆ ಎಚ್‌ಎಎಲ್‌ ಗೆ ವಾಯುಸೇನೆ ಟೆಂಡರ್

ನವದೆಹಲಿ: ಚೀನಾದೊಂದಿಗೆ ದಿನೇ ದಿನೇ ಸಂಘರ್ಷದ ವಾತಾವರಣ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವಾಯುಪಡೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು 12 ಸುಧಾರಿತ Su-30MKI ಫೈಟರ್ ಜೆಟ್‌ಗಳ ಖರೀದಿಗೆ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಜೆಟ್ ವಿಮಾನ ಖರೀದಿ ಟೆಂಡರ್ ನೀಡಿದೆ.

Advertisement

ಇತ್ತೀಚೆಗೆ, 12 Su-30MKI ಯುದ್ಧವಿಮಾನಗಳನ್ನು ಖರೀದಿಸಲು ಎಚ್‌ಎಎಲ್‌ಗೆ ಭಾರತೀಯ ವಾಯುಸೇನೆ ಟೆಂಡರ್ ನೀಡಲಾಗಿದೆ. ಇದನ್ನು ರಷ್ಯಾದ ಮೂಲ ಉಪಕರಣ ತಯಾರಕರ ಸಹಭಾಗಿತ್ವದಲ್ಲಿ HAL ಭಾರತದಲ್ಲೇ ಈ ವಿಮಾನಗಳನ್ನು ತಯಾರಿಸಲಿದೆ" ಎಂದು ರಕ್ಷಣಾ ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ.
ಇತ್ತೀಚೆಗೆ, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯು ಭಾರತೀಯ ವಾಯುಪಡೆಯ ಫೈರ್‌ಪವರ್ ಅನ್ನು 'ಗಾಲ್ವನೈಸ್ ಮಾಡಿದೆ ಮತ್ತು ಹೆಚ್ಚು ವರ್ಧಿಸಿದೆ' ಮತ್ತು ಯಾವುದೇ ಸಂಘರ್ಷದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ರಾಷ್ಟ್ರದ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಹೇಳಿದ್ದರು. ಸುಖೋಯ್ ಸು-30 ಫೈಟರ್ ಜೆಟ್‌ಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಪ್ರಬಲ ಸಂಯೋಜನೆಯನ್ನು ಅವರು ಒತ್ತಿ ಹೇಳಿದ್ದರು. ಮುಂದಿನ ಪೀಳಿಗೆಯ ಬ್ರಹ್ಮೋಸ್ ಕ್ಷಿಪಣಿಗಳ ಸಣ್ಣ ಆವೃತ್ತಿಗಳನ್ನು ಇತರ ಯುದ್ಧ ವಿಮಾನಗಳಿಗೆ ಅಳವಡಿಸಲು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು.

Advertisement
Advertisement
Tags :
Advertisement