ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೊಟ್ಟೆ ಆಫರ್ ನೋಡಿ 48 ಸಾವಿರ ಕಳೆದುಕೊಂಡ ಮಹಿಳೆ

ಕೇವಲ 1 ರೂ.ಗೆ ಒಂದು ಮೊಟ್ಟೆ ಎಂಬ ಆಫರ್ ಮೆಸೇಜ್ ನೋಡಿ ಮಹಿಳೆಯೊಬ್ಬರು ಬರೋಬ್ಬರಿ 48,199 ರೂ. ಕಳೆದುಕೊಂಡಿದ್ದಾರೆ. ವಸಂತನಗರದ ಮಹಿಳೆಯೊಬ್ಬರ ಇಮೇಲ್‍ಗೆ ಫೆ.17ರಂದು ಆನ್‍ಲೈನ್ ಶಾಪಿಂಗ್ ಕಂಪನಿಯೊಂದು ಕಳುಹಿಸಿದ್ದ ಸಂದೇಶ ನೋಡಿ ಮೋಸಹೋಗಿದ್ದಾರೆ.
04:52 PM Feb 26, 2024 IST | Ashitha S

ಬೆಂಗಳೂರು:  ಕೇವಲ 1 ರೂ.ಗೆ ಒಂದು ಮೊಟ್ಟೆ ಎಂಬ ಆಫರ್ ಮೆಸೇಜ್ ನೋಡಿ ಮಹಿಳೆಯೊಬ್ಬರು ಬರೋಬ್ಬರಿ 48,199 ರೂ. ಕಳೆದುಕೊಂಡಿದ್ದಾರೆ. ವಸಂತನಗರದ ಮಹಿಳೆಯೊಬ್ಬರ ಇಮೇಲ್‍ಗೆ ಫೆ.17ರಂದು ಆನ್‍ಲೈನ್ ಶಾಪಿಂಗ್ ಕಂಪನಿಯೊಂದು ಕಳುಹಿಸಿದ್ದ ಸಂದೇಶ ನೋಡಿ ಮೋಸಹೋಗಿದ್ದಾರೆ.

Advertisement

ಆ ಮೆಸೇಜ್ ಕ್ಲಿಕ್ ಮಾಡಿ ನೋಡಿದಾಗ 48 ಮೊಟ್ಟೆ ಅಂದರೆ 4 ಡಜನ್ ಮೊಟ್ಟೆಗೆ ಕೇವಲ 49 ರೂ. ಆಫರ್ ಇರುವುದು ಗಮನಿಸಿದ್ದಾರೆ. ಅಂದರೆ 1 ಮೊಟ್ಟೆಗೆ 1 ರೂ. ನಂತರ ಡೆಲಿವರಿ ವಿಳಾಸ ಹಾಗೂ ಮೊಬೈಲ್ ನಂಬರ್ ಹಾಗೂ ಕಳುಹಿಸಲು ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿದ ಬಳಿಕ ಮೊಬೈಲ್‍ಗೆ ಬಂದ ಒಟಿಪಿ ನಂಬರ್ ನಮೂದಿಸಿ ಕೇವಲ 49 ರೂ. ಪಾವತಿಸಿದ್ದರು.

ಇದಾದ ಕೆಲ ನಿಮಿಷಗಳಲ್ಲೇ ಮಹಿಳೆ ಅಕೌಂಟ್‍ನಿಂದ 48,199 ರೂ. ಕಡಿತವಾಗಿರುವ ಮೆಸೇಜ್ ಬಂದಿದೆ. ತಕ್ಷಣ ಗಮನಿಸಿದ ಮಹಿಳೆ ತಕ್ಷಣ ಬ್ಯಾಂಕ್‍ಗೆ ಮಾಹಿತಿ ನೀಡಿ ಕ್ರೆಡಿಟ್ ಕಾರ್ಡ್ ಅಕೌಂಟ್ ಬ್ಲಾಕ್ ಮಾಡಿಸಿ ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ. ಸದ್ಯ ದೂರು ದಾಖಲಾಗಿದೆ.

Advertisement

Advertisement
Tags :
crimeGOVERNMENTindiaKARNATAKALatestNewsNewsKannadaOnline fraud
Advertisement
Next Article