ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಟಿ ಅಮೂಲ್ಯ ಮಾವನ ಮನೆ ಮೇಲೆ ಚುನಾವಣಾಧಿಕಾರಿಗಳಿಂದ ದಾಳಿ

ನಟಿ ಅಮೂಲ್ಯ ಮಾವ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರಾಮಚಂದ್ರ  ಅವರ ಮನೆ ಮೇಲೆ ರಾತ್ರಿ 10 ಗಂಟೆಯ ವೇಳೆಗೆ ಚುನಾವಣಾಧಿಕಾರಿಗಳು ದಾಳಿ ಮಾಡಿ 31 ಲೀಟರ್‌ ಮದ್ಯವನ್ನು  ವಶಪಡಿಸಿಕೊಂಡಿದ್ದಾರೆ.
08:27 AM Apr 25, 2024 IST | Ashika S

ಬೆಂಗಳೂರು: ನಟಿ ಅಮೂಲ್ಯ ಮಾವ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರಾಮಚಂದ್ರ  ಅವರ ಮನೆ ಮೇಲೆ ರಾತ್ರಿ 10 ಗಂಟೆಯ ವೇಳೆಗೆ ಚುನಾವಣಾಧಿಕಾರಿಗಳು ದಾಳಿ ಮಾಡಿ 31 ಲೀಟರ್‌ ಮದ್ಯವನ್ನು  ವಶಪಡಿಸಿಕೊಂಡಿದ್ದಾರೆ.

Advertisement

10 ವಾಹನಗಳಲ್ಲಿ ಬಂದ 30ಕ್ಕೂ ಹೆಚ್ಚು ಅಧಿಕಾರಿಗಳು ಆರ್‌ಆರ್ ನಗರದಲ್ಲಿರುವ ನಿವಾಸದದ ಮೇಲೆ ದಾಳಿ ಮಾಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಮಚಂದ್ರ, ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಮನೆ ಮೇಲೆ ದಾಳಿ ಮಾಡಿಸಿದ್ದಾರೆ. ದಾಳಿ ವೇಳೆ ಆರ್‌ಓಗೆ ಪದೇ ಪದೇ ಪೋನ್ ಬರುತಿತ್ತು. ಅವರನ್ನು ಎರಡು ದಿನನ ಒಳಗಡೆ ಹಾಕಿಸಿ ಎಂದು ಫೋನಿನಲ್ಲಿ ಇದ್ದ ವ್ಯಕ್ತಿ ಹೇಳುತ್ತಿದ್ದರು.

Advertisement

ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆ ಮದ್ಯ ತರಿಸಿದ್ದೆ. ‌‌ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಆಚರಿಸಬಾರದು ಎಂದು ಸುಮ್ಮನೆ ಆಗಿದ್ದೆವು.

ಕಾಂಗ್ರೆಸ್‌  ಈ ಭಾಗದಲ್ಲಿ ಹಣವನ್ನು ಹಂಚಿಕೆ ಮಾಡುತ್ತಿತ್ತು. ಅದಕ್ಕೆ ನಾವು ಅಡ್ಡಿ ಪಡಿಸುತ್ತೇವೆ ಎಂದು ನಮ್ಮ ಮನೆ ಮೇಲೆ‌ ದಾಳಿ ಮಾಡಿದ್ದಾರೆ ಎಂದು ದೂರಿದರು.

Advertisement
Tags :
bengaluruELECTION COMMISSIONLatetsNewsNewsKarnatakaRAIDS
Advertisement
Next Article