For the best experience, open
https://m.newskannada.com
on your mobile browser.
Advertisement

ಭಾರತಕ್ಕೆ ವಿಶ್ವಸಂಸ್ಥೆ ಕಾಯಂ ಸ್ಥಾನ ನೀಡಬೇಕು: ಎಲಾನ್‌ ಮಸ್ಕ್‌ ಆಗ್ರಹ

ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕು  ಎಂದು ಟೆಸ್ಲಾ ಸಿಇಒ, ಎಕ್ಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎಲಾನ್‌ ಮಸ್ಕ್‌ ಆಗ್ರಹಿಸಿದ್ದಾರೆ.
11:29 AM Jan 23, 2024 IST | Ramya Bolantoor
ಭಾರತಕ್ಕೆ ವಿಶ್ವಸಂಸ್ಥೆ ಕಾಯಂ ಸ್ಥಾನ ನೀಡಬೇಕು   ಎಲಾನ್‌ ಮಸ್ಕ್‌ ಆಗ್ರಹ

ವಾಷಿಂಗ್ಟನ್:‌ ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕು  ಎಂದು ಟೆಸ್ಲಾ ಸಿಇಒ, ಎಕ್ಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎಲಾನ್‌ ಮಸ್ಕ್‌ ಆಗ್ರಹಿಸಿದ್ದಾರೆ.

Advertisement

ವಿಶ್ವಸಂಸ್ಥೆಯು ಬದಲಾವಣೆ ತರಲು ಹಿಂಜರಿಯುತ್ತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ತಾವು ಹೊಂದಿರುವ ಹೆಚ್ಚಿನ ಅಧಿಕಾರವನ್ನು ಬಳಸಿಕೊಳ್ಳಲು ಬಯಸುತ್ತಿವೆ. ಇದೇ ಕಾರಣಕ್ಕಾಗಿ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಎಲಾನ್‌ ಮಸ್ಕ್‌ ಒತ್ತಾಯಿಸಿದ್ದಾರೆ.

Advertisement

Advertisement
Tags :
Advertisement