ಕರ್ನಾಟಕ1 | ಬೆಂಗಳೂರು-ಮೈಸೂರು-ಮಲೆನಾಡು-ಬೆಳಗಾವಿ-ಕರಾವಳಿ-ಕಲಬುರಗಿ-
ಹೊರನಾಡ ಕನ್ನಡಿಗರು1
ದೇಶ-ವಿದೇಶ-1 | ದೇಶ-1
ವಿಶೇಷ-
ವಿಜ್ಞಾನ/ತಂತ್ರಜ್ಞಾನ | ಸಾಂಡಲ್ ವುಡ್
ಮನರಂಜನೆ-ಕ್ರೀಡೆ-1ಕ್ಯಾಂಪಸ್-1
ಇತರೆ- | ಆರೋಗ್ಯ-ಅಡುಗೆ ಮನೆ-ಸಮುದಾಯ-ಕ್ರೈಮ್-ಶಿಕ್ಷಣ-ವಿಡಿಯೊ-ಪಾಡ್‌ಕಾಸ್ಟ್‌-ಉದ್ಯೋಗ-
Advertisement

ಹೊರಗುತ್ತಿಗೆ ನೇಮಕಾತಿ ಕೆಲ ಷರತ್ತು ರದ್ದು ಪಡಿಸಲು ಆಗ್ರಹ

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ನೀಡಿ, ಷರತ್ತುಗಳ ಮೂಲಕ ಕಿತ್ತು ಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಎದುರು ದಸಂಸ ಪ್ರತಿಭಟನೆ ನಡೆಸಿದೆ.
09:30 AM Jul 07, 2024 IST | Ashitha S

ಮಂಡ್ಯ : ಹೊರಗುತ್ತಿಗೆ ನೇಮಕಾತಿ ಮೀಸಲಾತಿ ನೀಡಿ, ಷರತ್ತುಗಳ ಮೂಲಕ ಕಿತ್ತು ಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಎದುರು ದಸಂಸ ಪ್ರತಿಭಟನೆ ನಡೆಸಿತಲ್ಲದೆ, ಸರ್ಕಾರದ ಸುತ್ತೋಲೆಯ 1 ಮತ್ತು 6 ನೇ ಷರತ್ತುಗಳು ಸರ್ಕಾರದ ಸದುದ್ದೇಶದ ಹೊರಗುತ್ತಿಗೆಯಲ್ಲಿನ ಮೀಸಲಾತಿ ನೀತಿಗೆ ತದ್ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Advertisement

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದ ಸಂಸದ ಗುರುಪ್ರಸಾದ್    ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ಕರ್ನಾಟಕ ಸರ್ಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ನಿಯಮಗಳನ್ನು ಜಾರಿಗೆ ತರಲು  ಆದೇಶ ನೀಡಿರುವುದನ್ನು ದಸಂಸ ಸ್ವಾಗತಿಸುತ್ತದೆ ಎಂದ ಅವರು. ಹಲವಾರು ವರ್ಷಗಳಿಂದ ಉದ್ಯೋಗದ ನೇಮಕಾತಿಗಳೇ ನಡೆಯದೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಲಕ್ಷಾಂತರ ನಿರುದ್ಯೋಗಿ ಯುವಕರ ಸಮೂಹವು ಕಂಗಾಲಾಗಿದ್ದ ಸಂದರ್ಭದಲ್ಲಿ ಸರ್ಕಾರದ ಈ ಆದೇಶದಿಂದ ಅಹಿಂದ ಸಮುದಾಯದ ನಿರುದ್ಯೋಗಿ ಯುವಕರು ಸಂತೋಷಗೊಂಡಿದೆ ಹರ್ಷವ್ಯಕ್ತಪಡಿಸಿದರು.        ಆದರೆ, ಸರ್ಕಾರದ ಸುತ್ತೋಲೆಯ 1 ಮತ್ತು 6 ನೇ ಷರತ್ತುಗಳು ಸರ್ಕಾರದ ಸದುದ್ದೇಶದ ಹೊರಗುತ್ತಿಗೆಯಲ್ಲಿನ ಮೀಸಲಾತಿ ನೀತಿಗೇನೇ ತದ್ವಿರುದ್ಧವಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.

1ನೇ ಷರತ್ತಿನಲ್ಲಿ 45 ದಿನಗಳಿಗಿಂತ ಕಡಿಮೆ ಅವಧಿಗೆ ನೇಮಕಾತಿ ಮಾಡಿಕೊಳ್ಳುವಾಗ ಮೀಸಲಾತಿ ಅನ್ವಯವಾಗುವುದಿಲ್ಲ ಎಂದಿದೆ. ಇದು ಮೀಸಲಾತಿ ವಿರೋಧಿಗಳಿಗೆ ಅನುಕೂಲವಾಗಿದ್ದು ಇದನ್ನು ರದ್ದು ಪಡಿಸಿ. ಎಷ್ಟೇ ಅವಧಿಗೆ ನೇಮಕಾತಿ ಮಾಡಿಕೊಂಡರೂ ಮೀಸಲಾತಿ ನೀತಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.

Advertisement

ಇನ್ನು 6ನೇ ಷರತ್ತಿನ ಪ್ರಕಾರ  ಯಾವುದೇ ಇಲಾಖೆಯಲ್ಲಿ ಹೊರಗುತ್ತಿಯಲ್ಲಿ ನೇಮಕಾತಿ ಮಾಡಿಕೊಳ್ಳುವಾಗ 20ಕ್ಕಿಂತ  ಹೆಚ್ಚು ಜನರನ್ನು ನೇಮಕ ಮಾಡಿಕೊಂಡರೆ ಮಾತ್ರ ಮೀಸಲಾತಿ ನೀತಿಯನ್ನು ಅನುಸರಿಸಬೇಕು ಎಂದಿದೆ.  ಇದೂ ಕೂಡ ನ್ಯಾಯ ಸಮ್ಮತವಾಗಿಲ್ಲ, ಎಂದು ತಮ್ಮ ಅಸಮದಾನ ವ್ಯಕ್ತಪಡಿಸಿದ ಅವರು ಮೀಸಲಾತಿಯನ್ನು ವಂಚಿಸಲು ಸದಾ ಸಿದ್ಧ ಇರುವವರಿಗೆ ಈ ನಿಬಂಧನೆ ಸಹಕಾರಿಯಾಗಲಿದೆ. 20ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿಗಳಿದ್ದಾಗ ಮಾತ್ರ ಮೀಸಲಾತಿ ನೀತಿ ಅನ್ವಯಿಸುತ್ತದೆ  ಎಂದು ಸರ್ಕಾರವೇ ನಿರ್ಬಂಧ ವೊಡ್ಡಿದರೆ ಎಲ್ಲಾ ನೇಮಕಾತಿ ಉದ್ಯೋಗಗಳನ್ನು  20ರ ಒಳಗೇ ನಿಗದಿಪಡಿಸುತ್ತ ಮೀಸಲಾತಿಯನ್ನು ವಂಚಿಸಬಹುದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೆಲ್ಲ ಕಾರಣಕ್ಕೆ ರಾಜ್ಯ ಸರ್ಕಾರ ಸದರಿ 1 ಮತ್ತು 6 ನೇ ಶರತ್ತನ್ನು ಮಾರ್ಪಾಡುಗೊಳಿಸಿ  ಉದ್ಯೋಗಗಳನ್ನು ಸಂಖ್ಯೆ ಎಷ್ಟೇ ಇರಲಿ ಮತ್ತು ಎಷ್ಟೇ ಅವಧಿಯದ್ದಾಗಿರಲಿ ಅಲ್ಲಿ  ರೋಸ್ಟರ್ ನಿಯಮಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಲೇಬೇಕು ಎಂದು ಒತ್ತಾಯಿಸಿದರು. ಈ ಸಂಬಂದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ  ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವೈ.ರಾಜಶೇಖರ್, ಹುಲ್ಲಕೆರೆ ಮಹಾದೇವ್, ಲಕ್ಷ್ಮಣ್ ಹೊಸಕೊಟೆ, ರವಿಚಂದ್ರ ಗಜಾಂ, ಹರಳಕೆರೆ ಗೋವಿಂದರಾಜು, ಹಾರೋಹಳ್ಳಿ ಸೋಮು, ಕಂಚನಹಳ್ಳಿ ನಾಗರಾಜು ಇನ್ನಿತರರು ಭಾಗವಹಿಸಿದ್ದರು.

Advertisement
Tags :
enforcementLATEST NEWSNews Karnatakareservationstate governmentTODAY
Advertisement
Next Article