ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟೆಸ್ಟ್ ಸರಣಿ​: ಭಾರತದ ವಿರುದ್ಧ ಬಲಿಷ್ಠ ಇಂಗ್ಲೆಂಡ್​ ಟೀಂ ಪ್ರಕಟ

ಸೌತ್​​ ಆಫ್ರಿಕಾದ ಪ್ರವಾಸ ಬೆನ್ನಲ್ಲೇ ಟೀಮ್​ ಇಂಡಿಯಾ ಇಂಗ್ಲೆಂಡ್​​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಜನವರಿ 25ರಂದು ಶುರುವಾಗೋ ಈ ಟೆಸ್ಟ್​ ಸರಣಿಗೆ ಬಲಿಷ್ಠ ಇಂಗ್ಲೆಂಡ್​​ ತಂಡ ಪ್ರಕಟವಾಗಿದೆ.
09:07 PM Dec 11, 2023 IST | Ashitha S

ಸೌತ್​​ ಆಫ್ರಿಕಾದ ಪ್ರವಾಸ ಬೆನ್ನಲ್ಲೇ ಟೀಮ್​ ಇಂಡಿಯಾ ಇಂಗ್ಲೆಂಡ್​​ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಜನವರಿ 25ರಂದು ಶುರುವಾಗೋ ಈ ಟೆಸ್ಟ್​ ಸರಣಿಗೆ ಬಲಿಷ್ಠ ಇಂಗ್ಲೆಂಡ್​​ ತಂಡ ಪ್ರಕಟವಾಗಿದೆ.

Advertisement

ಇಂಗ್ಲೆಂಡ್​​​​ ತಂಡವು ಬೆನ್​ ಸ್ಟೋಕ್ಸ್​​ ನಾಯಕತ್ವದಲ್ಲಿ ಟೀಂ ಇಂಡಿಯಾದ ವಿರುದ್ಧ ಐದು ಟೆಸ್ಟ್​ಗಳು ಆಡಲಿದೆ. ಮೊದಲ ಟೆಸ್ಟ್​ ಪಂದ್ಯವೂ ಹೈದರಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ 25ರಂದು ನಡೆಯಲಿದೆ. ಇನ್ನು, 2ನೇ ಟೆಸ್ಟ್ ಫೆಬ್ರವರಿ 2 ರಿಂದ ವಿಶಾಖಪಟ್ನಂನಲ್ಲಿ, 3ನೇ ಟೆಸ್ಟ್​​ ರಾಜ್​ಕೋಟ್​ನಲ್ಲಿ, 4ನೇ ಟೆಸ್ಟ್ ರಾಂಚಿ ಮತ್ತು ಕೊನೇ ಟೆಸ್ಟ್ ಧರ್ಮಶಾಲಾದಲ್ಲಿ ನಡೆಯಲಿದೆ.

ಇನ್ನು ತಂಡದಲ್ಲಿ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್​ಗೆ ಸ್ಥಾನ ಸಿಕ್ಕಿಲ್ಲ. ಶೋಯೆಬ್ ಬಶೀರ್, ಟಾಮ್ ಹಾರ್ಟ್ಲಿ ಮತ್ತು ಗಸ್ ಅಟ್ಕಿನ್ಸನ್ ಅನ್ನೋ ಹೊಸಬರಿಗೆ ಮಣೆ ಹಾಕಲಾಗಿದೆ.

Advertisement

ತಂಡದಲ್ಲಿ ಬೆನ್ ಸ್ಟೋಕ್ಸ್ (ಕ್ಯಾಪ್ಟನ್​), ರೆಹಾನ್ ಅಹ್ಮದ್, ಜೇಮ್ಸ್ ಆಂಡರ್ಸನ್, ಗುಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋ (ವಿಕೆಟ್ ಕೀಪರ್), ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಜಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫಾಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲ್ಲಿ ರಾಬಿನ್ಸನ್, ಜೋ ರೂಟ್ ಮತ್ತು ಮಾರ್ಕ್ ವುಡ್ ಸ್ಥಾನ ಪಡೆದುಕೊಂಡಿದ್ದಾರೆ.

 

Advertisement
Tags :
englandGOVERNMENTindiaLatestNewsNewsKannadasportsTEAMಇಂಗ್ಲೆಂಡ್
Advertisement
Next Article