For the best experience, open
https://m.newskannada.com
on your mobile browser.
Advertisement

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು ಹೀಯಾಳಿಸಿದ್ದ ಕಿಡಿಗೇಡಿಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
09:34 AM May 19, 2024 IST | Chaitra Kulal
ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ   ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು ಹೀಯಾಳಿಸಿದ್ದ ಕಿಡಿಗೇಡಿಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

Advertisement

ಸತತ 6 ಗೆಲುವುಗಳೊಂದಿಗೆ ಪ್ಲೇ ಆಫ್​ಗೆ ಆರ್​ಸಿಬಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್​ಕುಮಾರ್​ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಹಾಡಿ ಹೊಗಳಲಾಗುತ್ತಿದೆ. ಚೆನ್ನೈ ವಿರುದ್ಧ ಬೆಂಗಳೂರು ತಂಡ ಗೆಲುವು ಸಾಧಿಸುತ್ತಿದ್ದಂತೆ ಇತ್ತ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

ನಮ್ಮ ಆರ್​ಸಿಬಿ ಪ್ಲೇ ಆಫ್​ಗೆ ಹೋಗೋಕೆ ಕಾರಣನೇ ನಮ್ಮ ದೊಡ್ಮನೆಯ ಅದೃಷ್ಟ ದೇವತೆ ಅಶ್ವಿನಿ ಅಕ್ಕ ಎಂದು ಸುಬ್ಬು ಎನ್. ಮೂರ್ತಿ ಎನ್ನುವರು ಎಕ್ಸ್ ಅಕೌಂಟ್​ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಅಶ್ವಿನ್ ಅವರ ಬಗ್ಗೆ ಚೀಪ್ ಕಮೆಂಟ್ಸ್ ಮಾಡಿದ್ದ ಇಡಿಯಟ್ಸ್​ ಈಗ ಸತತವಾಗಿ 6 ಪಂದ್ಯಗಳನ್ನು ಆರ್​ಸಿಬಿ ಗೆದ್ದು ಪ್ಲೇ ಆಫ್​ಗೆ ಹೋಗಿದೆ. ಈಗ ಎಲ್ಲಿದ್ದೀರಾ ಇಡಿಯಟ್ಸ್ ಎಂದು ನಿಂದಿಸಿದ್ದವರಿಗೆ ಪ್ರಶ್ನೆ ಮಾಡಿದ್ದಾರೆ.

Advertisement

ಪವರ್ ಸ್ಟಾರ್ ಅಭಿಮಾನಿ ಎನ್ನುವ ಎಕ್ಸ್​ ಅಕೌಂಟ್​ನಲ್ಲಿ ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ. ಅದೃಷ್ಟ ತಂದ ಹೆಣ್ಣು (ಅಶ್ವಿನಿ ಪುನೀತ್ ರಾಜ್ ಕುಮಾರ್) ಅಂತ ಬರೆದು ಫೋಟೋ ಜೊತೆ ಶೇರ್ ಮಾಡಿದ್ದಾರೆ. ಐಪಿಎಲ್​ ಆರಂಭದ ವೇಳೆ ಆರ್​ಸಿಬಿಯ ಅನ್​ಬಾಕ್ಸ್​ ಇವೆಂಟ್​ನಲ್ಲಿ ಭಾಗವಹಿಸಿದ್ದ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಆರ್​ಸಿಬಿ ಜೆರ್ಸಿ ಅನಾವರಣಗೊಳಿಸದ್ದರು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದಿದೆ.

Advertisement
Tags :
Advertisement