ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾಂಗ್ರೆಸ್‌ನವರು  ಬರೋದು ರಾಮನಿಗೂ ಇಷ್ಟವಿಲ್ಲ: ಸಿ.ಟಿ.ರವಿ

ಅಯೋಧ್ಯೆ  ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಬರಲ್ಲ ಎಂದು ಹೇಳಿದ ವಿಚಾರದ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ  ರಾಮಮಂದಿರ  ಉದ್ಘಾಟನೆಗೆ ಕಾಂಗ್ರೆಸ್‌ನವರು  ಬರೋದು ರಾಮನಿಗೂ ಇಷ್ಟವಿಲ್ಲ. ಎಲ್ಲವೂ ರಾಮನಿಚ್ಛೆಯಂತೆ ನಡೆದಿದೆ ಎಂದು ವ್ಯಂಗ್ಯವಾಡಿದ್ದಾರೆ.
10:55 PM Jan 10, 2024 IST | Ashika S

ಬೆಂಗಳೂರು: ಅಯೋಧ್ಯೆ  ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಬರಲ್ಲ ಎಂದು ಹೇಳಿದ ವಿಚಾರದ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ  ರಾಮಮಂದಿರ  ಉದ್ಘಾಟನೆಗೆ ಕಾಂಗ್ರೆಸ್‌ನವರು  ಬರೋದು ರಾಮನಿಗೂ ಇಷ್ಟವಿಲ್ಲ. ಎಲ್ಲವೂ ರಾಮನಿಚ್ಛೆಯಂತೆ ನಡೆದಿದೆ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಮಾಧ್ಯಮದವರೊಂದಿಗೆ ಮಾತನಾಡಿದ  ಅವರು, ಏನಾಗುತ್ತೋ ಅದು ಒಳ್ಳೆಯದಕ್ಕೇ. ಕಾಂಗ್ರೆಸ್‌ನವರು ಉದ್ಘಾಟನೆಗೆ ಹೋಗಬಾರದು ಅನ್ನೋದು ರಾಮನ ಇಚ್ಛೆ. ನಾವು ಯಾವ ಮುಖ ಇಟ್ಕೊಂಡು ಹೋಗೋದು ಎಂದು ಕಾಂಗ್ರೆಸ್‌ಗೂ ಅನಿಸಿರಬಹುದು. ಎಲ್ಲವೂ ರಾಮನಿಚ್ಛೆ ಎಂದು ಟೀಕಿಸಿದರು.

ರಾಮಸೇತು, ರಾಮ ಎಲ್ಲವೂ ಕಾಲ್ಪನಿಕ ಎಂದು ಕಾಂಗ್ರೆಸ್ ಹೇಳಿತ್ತು. ಹೀಗಾಗಿ ಇದು ರಾಮನ ಇಚ್ಛೆ. ನಿಮಗೆ ಮುಸ್ಲಿಂ ಲೀಗ್ ಕರೆಯುವ ದಾವತ್‌ಗೆ (ಔತಣ) ಹೋಗಬಹುದು.

Advertisement

ರಾಮನ ಪ್ರಾಣಪ್ರತಿಷ್ಠೆಗೆ ಹೋಗಲು ಆಗೋದಿಲ್ಲ. ಆಗುವುದೆಲ್ಲಾ ಒಳ್ಳೆಯದಕ್ಕೆ. ಎಲ್ಲವೂ ರಾಮನ ಇಚ್ಛೆಯಂತೆ ಆಗಿದೆ ಎಂದು ಲೇವಡಿ ಮಾಡಿದರು.

Advertisement
Tags :
LatetsNewsNewsKannadaಅಯೋಧ್ಯೆಉದ್ಘಾಟನೆಕಾಂಗ್ರೆಸ್ರಾಮರಾಮಮಂದಿರಸಿ.ಟಿ.ರವಿ
Advertisement
Next Article