ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಯುಪಿಯಲ್ಲಿ ರೈಲನ್ನೇ ತಳ್ಳಿದ ದೃಶ್ಯ ವೈರಲ್

ಭಾರತೀಯ ರೈಲ್ವೆಯ ಮಾನಹಾನಿ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ರೈಲ್ವೆ ನೌಕರರು ರೈಲು ಬೋಗಿ ತಳ್ಳುತ್ತಿರುವುದನ್ನು ಕಾಣಬಹುದು. ಈ ರೈಲು ಬೋಗಿ ಅಧಿಕಾರಿಗಳಿಗೆ ಸೇರಿದ್ದು, ಅಂದರೆ ಇದರಲ್ಲಿ ಅವರು ತಪಾಸಣೆಗೆ ಹೋಗುತ್ತಾರೆ.
01:16 PM Mar 23, 2024 IST | Ashitha S

ತ್ತರಪ್ರದೇಶ: ಭಾರತೀಯ ರೈಲ್ವೆಯ ಮಾನಹಾನಿ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ರೈಲ್ವೆ ನೌಕರರು ರೈಲು ಬೋಗಿ ತಳ್ಳುತ್ತಿರುವುದನ್ನು ಕಾಣಬಹುದು. ಈ ರೈಲು ಬೋಗಿ ಅಧಿಕಾರಿಗಳಿಗೆ ಸೇರಿದ್ದು, ಅಂದರೆ ಇದರಲ್ಲಿ ಅವರು ತಪಾಸಣೆಗೆ ಹೋಗುತ್ತಾರೆ.

Advertisement

ಆದರಿಲ್ಲಿ ತಪಾಸಣಾ ವಾಹನವೇ ಕೆಟ್ಟು ನಿಂತಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಉತ್ತರ ಪ್ರದೇಶದ ಅಮೇಥಿಯಲ್ಲಿದ್ದು, ಹಳಿಗಳ ಮೇಲೆ ಕೆಟ್ಟು ನಿಂತಿದ್ದ ರೈಲನ್ನು ಜನರು ತಳ್ಳುತ್ತಿರುವುದು ಕಂಡುಬಂದಿದೆ. ರೈಲ್ವೆ ಅಧಿಕಾರಿಗಳಿಗಾಗಿ ನಿರ್ಮಿಸಲಾದ ಡಿಪಿಸಿ ರೈಲು ಹಳಿಗಳ ಮಧ್ಯದಲ್ಲಿ ನಿಂತಿತು. ನಂತರ ನೌಕರರು ಅದನ್ನು ತಳ್ಳುತ್ತಿರುವುದು ಕಂಡುಬಂದಿದೆ.

ಡಿಪಿಸಿ ರೈಲಿನಲ್ಲಿ ದೋಷ ಸಂಭವಿಸಿದಾಗ ಅದು ಮುಖ್ಯ ಮಾರ್ಗದಲ್ಲಿ ನಿಂತಿದೆ ಎಂದು ಹೇಳಲಾಗಿದೆ. ನಂತರ ರೈಲ್ವೇ ನೌಕರರು ರೈಲನ್ನು ಮುಖ್ಯ ಮಾರ್ಗದಿಂದ ಲೂಪ್ ಲೈನ್‌ಗೆ ತಳ್ಳಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈಲ್ವೆ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಇಡೀ ಘಟನೆ ಅಮೇಥಿಯ ನಿಹಾಲ್‌ಗಢ್ ರೈಲು ನಿಲ್ದಾಣದಲ್ಲಿ ಕಂಡುಬಂದದ್ದು ಎನ್ನಲಾಗಿದೆ.

 

Advertisement
Tags :
indiaKARNATAKALatestNewsNewsKannadaPOLICEನವದೆಹಲಿ
Advertisement
Next Article