For the best experience, open
https://m.newskannada.com
on your mobile browser.
Advertisement

ಮಿಲಾಗ್ರಿಸ್ ಕಾಲೇಜುನಲ್ಲಿ ಎಕ್ಸೆಲ್ಸೋ - 2024 ರಾಷ್ಟ್ರೀಯ ಅಂತರ್ ಕಾಲೇಜು ಸ್ಪರ್ಧೆ

ಮಾರ್ಚ್ 23ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಎಕ್ಸೆಲ್ಸೋ - 2024 ಒಂದು ದಿನದ ರಾಷ್ಟ್ರೀಯ ಅಂತರ್ ಕಾಲೇಜು ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
11:12 AM Mar 25, 2024 IST | Ashitha S
ಮಿಲಾಗ್ರಿಸ್ ಕಾಲೇಜುನಲ್ಲಿ ಎಕ್ಸೆಲ್ಸೋ   2024 ರಾಷ್ಟ್ರೀಯ  ಅಂತರ್ ಕಾಲೇಜು  ಸ್ಪರ್ಧೆ

ಮಂಗಳೂರು: ಮಾರ್ಚ್ 23ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಎಕ್ಸೆಲ್ಸೋ - 2024 ಒಂದು ದಿನದ ರಾಷ್ಟ್ರೀಯ ಅಂತರ್ ಕಾಲೇಜು ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.
Cola

Advertisement

ಸ್ವತಂತ್ರ ಹಣಕಾಸು ಸಲಹೆಗಾರ ಶ್ರೀಯುತ ಪೀಟರ್ ಆಂಥೋನಿ ಪಿಂಟೋ ಮುಖ್ಯ ಅತಿಥಿಯಾಗಿ ಆಗಮಿಸಿ, "ಈ ಅಂತರ್ ಕಾಲೇಜು ಉತ್ಸವಗಳು ವಿದ್ಯಾರ್ಥಿಗಳ ಉತ್ತಮ ಜೀವನ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದೆ" ಎಂದು ಅಭಿಪ್ರಾಯಪಟ್ಟರು.

Mila (1)

Advertisement

ವಿಜ್ಡೋಮ್ ಎಜುಕೇಶನ್ ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕಿ ನಿರ್ದೇಶಕರಾದ ಡಾ ಫ್ರಾನ್ಸಿಸ್ಕಾ ತೇಜ್ ಇವರು ಗೌರವಾನ್ವಿತ ಅತಿಥಿಯಾಗಿ ಆಗಮಿಸಿ ಅವರು ತಮ್ಮ ಭಾಷಣದಲ್ಲಿ ' ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಪ್ರತಿಭೆ, ಸೃಜನ ಶೀಲತೆ, ಹಾಗೂ ಸಾಮರ್ಥ್ಯ ಗಳನ್ನು ಪ್ರದರ್ಶಿಸಲು ಈ ಸ್ಪರ್ಧೆ ಬಹು ಮುಖ್ಯ ಎಂದು ಹೇಳಿದರು.  ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ಸಂಚಾಲಕ ವಂ. ಫಾದರ್ ಬೊನವೆಂಚರ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Collage

ವಿದ್ಯಾರ್ಥಿಪ್ರತಿನಿಧಿಗಳಾಗಿರುವ ಡೆನ್ಸನ್ ಡಿಸಿಲ್ವಾ, ಹಾಗೂ ಕೆ ಎಂ ಆಶೀಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾನಾ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಅತ್ಯುತ್ತಮ ನಿರ್ವಹಣಾ ತಂಡ, ಮಾನವ ಸಂಪನ್ಮೂಲ ಈವೆಂಟ್, ಮಾರ್ಕೆಟಿಂಗ್ ಈವೆಂಟ್ ಮತ್ತು ಐಸ್ ಬ್ರೇಕರ್ ಈವೆಂಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯಕ್ಕೆ ಸಂಯೋಜಿಸಲ್ಪಟ್ಟ 20 ಕಾಲೇಜುಗಳ ಸುಮಾರು 130 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜು ವಿಭಾಗದಲ್ಲಿ ಮ್ಯಾಪ್ಸ್ ಕಾಲೇಜು, ಮಂಗಳೂರು,ಸಮಗ್ರ ಚಾo ಪಿಯನ್, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ರನ್ನರ್ ಅಪ್ ಸ್ಥಾನ ಪಡೆದವು. ಪ್ರಾಂಶುಪಾಲ ವಂ ಗುರು.ಮೈಕಲ್ ಸಾಂತುಮಾಯೋ‌ ಸ್ವಾಗತಿಸಿ, ವಾಣಿಜ್ಯ ವಿಭಾಗ ಮುಖ್ಯಸ್ಥರು ಹಾಗೂ ಸಂಯೋಜಕಿಯಾಗಿರುವ ಗ್ಲಾನ್ಸಿಯಾ ಫೆರ್ನಾಂಡಿಸ್ ವಂದಿಸಿದರು. ವಿದ್ಯಾರ್ಥಿ ಜೋಸ್ಲಿನ್ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Advertisement