For the best experience, open
https://m.newskannada.com
on your mobile browser.
Advertisement

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಅರ್ಥಪೂರ್ಣವಾಗಿ ನಡೆದ ಆಟಿಸಂ ಜಾಗೃತಿ ʼಎಕ್ಷಪ್ಸನಲ್ 2024ʼ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ ಐಬ ಅಸೋಸಿಯೇಷನ್ ಜೊತೆ ಮಂಗಳೂರು ಚಾಪ್ಟರ್ ಅರ್ಪಿಸುವ 'ಆಟಿಸಂ ಜಾಗೃತಿ'ರ ಕುರಿತು ಎಕ್ಷಪ್ಸನಲ್ 2024 ಎಂಬ ವಿಭಿನ್ನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
01:36 PM Apr 29, 2024 IST | Ashitha S
ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಅರ್ಥಪೂರ್ಣವಾಗಿ ನಡೆದ ಆಟಿಸಂ ಜಾಗೃತಿ ʼಎಕ್ಷಪ್ಸನಲ್ 2024ʼ

ಮಂಗಳೂರು: ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಐಬ ಅಸೋಸಿಯೇಷನ್ ಜೊತೆ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ ಮಂಗಳೂರು ಚಾಪ್ಟರ್ ಅರ್ಪಿಸುವ "ಆಟಿಸಂ ಜಾಗೃತಿ"ರ ಕುರಿತು ಎಕ್ಷಪ್ಸನಲ್ 2024 ಎಂಬ ವಿಭಿನ್ನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
XC

Advertisement

ಪ್ರತಿ ವರ್ಷ ಏಪ್ರಿಲ್‌ 2ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು (World Autism Awareness Day) ಆಚರಿಸಲಾಗುತ್ತದೆ. ಮಕ್ಕಳಲ್ಲಿ ಕಂಡುಬರುವ ಆಟಿಸಂ ಸಮಸ್ಯೆಯ ಬಗೆಗೆ ಪೋಷಕರು ಜಾಗೃತರಾಗಬೇಕು ಎಂಬ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
VV (1)
ಏಪ್ರೀಲ್‌ 28 ರಂದು ಸಂಜೆ ಕದ್ರಿ ಪಾರ್ಕ್‌ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ  ಫ್ಯಾನ್ಸಿ ರ್ಯಾಂಪ್‌ ವಾಲ್ಕ್‌‌ ಏರ್ಪಡಿಸಲಾಗಿತ್ತು.
C (1)New Project

ಫ್ಯಾನ್ಸಿ ರ್ಯಾಂಪ್‌ ವಾಲ್ಕ್‌‌ ಸ್ಪರ್ಧೆಯಲ್ಲಿ ಅರ್ಚನಾ ಪ್ರಥಮ ಸ್ಥಾನ ಪಡೆದುಕೊಂಡು, 1ನೇ ರನ್ನರ್ ಅಪ್  ಆಗಿ ಅರ್ಜುನ್‌ ಹೊರಹೊಮ್ಮಿದರು. ಸಮಾಧಾನಕರ ಬಹುಮಾನವನ್ನು ಸಾಯಿ ಅನರ್ಘ್ಯ., ಸಿದ್ಧಾರ್ಥ್ ಹಾಗು ಕ್ಯಾಲ್ವಿನ್ ನರೋನ್ಹಾ ಪಡೆದುಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ / ಪ್ರಾಯೋಜಕರಾಗಿ ರವೀಂದ್ರ ಶೆಟ್ಟಿ, ವೀಣಾ ರಾಡ್ರಿಗಸ್, ಅಕ್ಷಿತಾ ಶೆಟ್ಟಿ, ವಿದ್ಯಾ ಶೆಟ್ಟಿ, ಮೀನಾ ನರೋನ್ಹಾ ಹಾಗೂ ದೀಪಕ್ ಗಂಗೂಲಿ ಭಾಗಿಯಾಗಿದ್ದರು.

Advertisement

ಈ ವಿಭಿನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗು ಬಹುಮಾನ ವಿತರಿಸಲಾಯಿತು. ಇನ್ನು ಈ ಕಾರ್ಯಕ್ರಮವನ್ನು ನಿರೂಪಣೆ ಮೂಲಕ ದೀಪಕ್ ಗಂಗೂಲಿ ಹಾಗೂ ಮೀನಾ ನರೋನ್ಹಾ ಚಂದಗಾಣಿಸಿ ಕೊಟ್ಟರು. ಕೊನೆಯಲ್ಲಿ ಎಲ್ಲಾ ಮಕ್ಕಳು ಫ್ಯಾನ್ಸಿ ಉಡುಗೆಯಲ್ಲಿ ರ್ಯಾಂಪ್‌ ವಾಲ್ಕ್‌ ಮಾಡಿ ಕಾರ್ಯಕ್ರಮವನ್ನು ಅಂದಗೊಳಿಸಿದರು.

Exceptional

Advertisement
Tags :
Advertisement