For the best experience, open
https://m.newskannada.com
on your mobile browser.
Advertisement

ಮತ್ತೆ ಮದ್ಯದ ಬೆಲೆ ಏರಿಕೆ ಸುಳಿವು ಕೊಟ್ಟ ಅಬಕಾರಿ ಸಚಿವ

ಅಬಕಾರಿ ಸಚಿವರು ಮತ್ತೆ ಮದ್ಯದ ದರ ಏರಿಕೆ ಸುಳಿವು ನೀಡಿದ್ದು, ಮದ್ಯಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.
10:32 AM Jan 31, 2024 IST | Ramya Bolantoor
ಮತ್ತೆ  ಮದ್ಯದ  ಬೆಲೆ ಏರಿಕೆ ಸುಳಿವು ಕೊಟ್ಟ ಅಬಕಾರಿ ಸಚಿವ

ಬೆಂಗಳೂರು : ಅಬಕಾರಿ ಸಚಿವರು ಮತ್ತೆ ಮದ್ಯದ ದರ ಏರಿಕೆ ಸುಳಿವು ನೀಡಿದ್ದು, ಮದ್ಯಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.

Advertisement

ರಾಯಚೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ತಿಮ್ಮಾಪುರ ಮದ್ಯದ ಬೆಲೆ ಏರಿಕೆ ಮಾಡುವುದರಿಂದ ಕುಡುಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಚಿವ ತಿಮ್ಮಾಪುರ ಹೇಳಿದ್ದಾರೆ.

ಸದ್ಯಕ್ಕೆ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವುದಿಲ್ಲ.ಅಕ್ರಮವಾಗಿ ಆಮದು ಮಾಡಿಕೊಂಡವರ ಮೇಲೆ ಕೇಸ್ ಹಾಕಲಾಗುತ್ತಿದೆ. ಮದ್ಯದ ಬೆಲೆ ಏರಿಕೆ ಮಾಡುವುದರಿಂದ ಈ ಬಾರಿ ಬಜೆಟ್ ನಲ್ಲಿ ಮತ್ತೆ ಮದ್ಯದ ದರ ಹೆಚ್ಚಳವಾಗುವ ಸಾಧ್ಯತೆಯಿದೆ.

Advertisement

ಕರ್ನಾಟಕ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಮತ್ತೊಮ್ಮೆ ಹೆಚ್ಚಿಸಲು ಪ್ರಸ್ತಾಪಿಸಿರುವುದಾಗಿ ವರದಿಯಾಗಿದೆ. ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10 ರೂ. ವರೆಗೆ ದರ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

Advertisement
Tags :
Advertisement