ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಉಚ್ಛಾಟಿತ ನಾಯಕ ಸಿಕೆ ನಾಣು ನೇಮಕ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ ಅವರಿಗೆ ಉಚ್ಛಾಟಿತ ನಾಯಕರು ಸೆಡ್ಡು ಹೊಡೆದಿದ್ದಾರೆ.
02:59 PM Dec 11, 2023 IST | Ashika S

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡ ಅವರಿಗೆ ಉಚ್ಛಾಟಿತ ನಾಯಕರು ಸೆಡ್ಡು ಹೊಡೆದಿದ್ದಾರೆ.

Advertisement

ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಇಂದು (ಡಿ.11)ಬೆಂಗಳೂರಿನ ಕೆ.ಜಿ.ಹಳ್ಳಿಯ ಖಾಸಗಿ ಹೋಟೆಲ್​ನಲ್ಲಿ ನಡೆದ ಸಭೆಯಲ್ಲಿ ಉಚ್ಛಾಟಿತ ನಾಯಕ ಸಿಕೆ ನಾಣು ಅವರನ್ನು ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ,  ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ಅವರನ್ನು ನೇಮಕ ಮಾಡಲಾಗಿದೆ.  ಇದು ನನ್ನ ನಿರ್ಣಯ ಅಲ್ಲ, ರಾಷ್ಟ್ರೀಯ ಕೌನ್ಸಿಲ್ ನಿರ್ಣಯ. ನಿತೀಶ್ ಕುಮಾರ್, ಲಾಲು ಪ್ರಸಾದ್​ ಭೇಟಿಗೆ ಹೋಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

Advertisement

ಮಕ್ಕಳ ಹಿತ, ಎರಡು ಸೀಟ್​ಗಾಗಿ ಸಿದ್ಧಾಂತ ಬಲಿ ಕೊಟ್ಟಿದ್ದೀರಿ. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನು ನಾಣುಗೆ ನೀಡಲಾಗಿದೆ. ನಾವು ಮೂರು ಅವಕಾಶ ಕೊಟ್ಟೆ. ಕೊನೆಗೆ ಇವತ್ತು ಅವರನ್ನ(ದೇವೇಗೌಡ) ಅಧ್ಯಕ್ಷಗಿರಿಯಿಂದ ತೆಗೆದು ಸಿಕೆ ನಾಣು ಅವರಿಗೆ ಅಧಿಕಾರ ಕೊಟ್ಟಿದ್ದೇವೆ 92ನೇ ವಯಸ್ಸಿನಲ್ಲಿ ತಮ್ಮ ಸಿದ್ದಾಂತ ಬಿಟ್ಟು ಕೊಟ್ರಿ. ನಾನು ಹುಟ್ಟಿದ್ದು ಸಿದ್ದಾಂತಕ್ಕಾಗಿ. ವಾಜಪೇಯಿಯವರು ಮಂತ್ರಿಯಾಗಲು ಕರೆದರೂ ನಾನು ಹೋಗಲಿಲ್ಲ.ಗೌವರ್ನರ್ ಆಗಲು ಕರೆದದೂ ಹೋಗಲಿಲ್ಲ. 5 ಮಂದಿ ಶಾಸಕರು ನಮ್ಮ ಬಳಿ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

Advertisement
Tags :
LatetsNewsNewsKannadaಜೆಡಿಎಸ್ನಾಯಕಸೆಡ್ಡುಹೆಚ್​ಡಿ ದೇವೇಗೌಡ
Advertisement
Next Article