For the best experience, open
https://m.newskannada.com
on your mobile browser.
Advertisement

ಕೇಂದ್ರ ಬಜೆಟ್‌ನಿಂದ ಈ ಬಾರಿ ಯಾವುದೆಲ್ಲಾ ದುಬಾರಿ ಗೊತ್ತ?

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ತೆರಿಗೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸಾಕಷ್ಟು ಮಂದಿಗೆ 2024ನೇ ಸಾಲಿನ ಮಧ್ಯಂತರ ಲೆಕ್ಕಾಚಾರದಿಂದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ
05:51 PM Feb 01, 2024 IST | Ashitha S
ಕೇಂದ್ರ ಬಜೆಟ್‌ನಿಂದ ಈ ಬಾರಿ ಯಾವುದೆಲ್ಲಾ ದುಬಾರಿ ಗೊತ್ತ

ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ತೆರಿಗೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸಾಕಷ್ಟು ಮಂದಿಗೆ 2024ನೇ ಸಾಲಿನ ಮಧ್ಯಂತರ ಲೆಕ್ಕಾಚಾರದಿಂದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

Advertisement

2024ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಕಿಚನ್ ಚಿಮಣಿ ಮೇಲೆ ಕಸ್ಟಮ್ ಸುಂಕ ಏರಿಕೆ ಮಾಡಿದೆ. ಸಿಗರೇಟ್ ಮೇಲೆ ಶೇಕಡಾ 16 ರಷ್ಟು ತೆರಿಗೆ ಹೆಚ್ಚಿಸಲಾಗಿದೆ. ಇದರ ಜೊತೆಗೆ ಬಜೆಟ್‌ನಿಂದಾಗಿ ಕೆಲವು ಉತ್ಪನ್ನಗಳ ದರವೂ ತುಟ್ಟಿಯಾಗುತ್ತಿದೆ.

ಯಾವುದೆಲ್ಲಾ ದುಬಾರಿ?
ಆಭರಣ
ಗೋಲ್ಡ್, ಪ್ಲಾಟಿನಂನಿಂದ ಉತ್ಪಾದಿಸಿದ ಉತ್ಪನ್ನ
ಸಿಗರೇಟ್‌
ಬೈಸಿಕಲ್
ಎಲೆಕ್ಟ್ರಿಕ್ ಕಿಚನ್ ಚಿಮಣಿ
ಕಂಪೌಂಡೆಂಡ್ ರಬ್ಬರ್
ವಾಹನಗಳ ಆಮದು, ಇವಿ

Advertisement

ಕೇಂದ್ರ ಬಜೆಟ್‌ನಲ್ಲಿ ಕಚ್ಚಾ ಗ್ಲಿಸರಿನ್ ಮೇಲಿನ ಕಸ್ಟಮ್ ಸುಂಕ ಶೇ.7.5 ರಿಂದ ಶೇ.2.5 ಕ್ಕೆ ಇಳಿಕೆ ಮಾಡಲಾಗಿದೆ. ಲಿಥಿಯಂ ಇಯಾನ್ ಸೆಲ್ ಬ್ಯಾಟರಿ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕಕ್ಕೆ ವಿನಾಯಿತಿ ನೀಡಲಾಗಿದೆ.

ಏನೇನು ಅಗ್ಗ?
ಟಿವಿ ಸೆಟ್
ಸ್ಮಾರ್ಟ್ ಫೋನ್
ಲ್ಯಾಬ್‌ನಲ್ಲಿ ಉತ್ಪಾದಿಸಿದ ಡೈಮೆಂಡ್
ಮೊಬೈಲ್ ಫೋನ್‌ಗೆ ಬಳಸುವ ಲಿಥಿಯಂ ಇಯಾನ್ ಬ್ಯಾಟರಿ
ಇವಿ ಗಳಲ್ಲಿ ಬಳಸುವ ಲಿಥಿಯಂ ಇಯಾನ್ ಸೆಲ್ ತಯಾರಿಸುವ ಮೆಷಿನ್
ಕ್ಯಾಮರಾ ಲೆನ್ಸ್
ಸೀಗಡಿ ಆಹಾರ ಅಗ್ಗವಾಗಲಿದೆ.

Read More:
1.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭ: ಇಲ್ಲಿದೆ ಹೈಲೆಟ್ಸ್‌

Advertisement
Tags :
Advertisement