For the best experience, open
https://m.newskannada.com
on your mobile browser.
Advertisement

ಏಕಾಏಕಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಸರ್ವರ್‌ ಡೌನ್‌

ಮೆಟಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ವಿಶ್ವಾದ್ಯಂತ ಸಾವಿರಾರು ಬಳಕೆದಾರರಿಗೆ ಏಕಾಏಕಿ ಸ್ಥಗಿತಗೊಂಡಿವೆ ಎಂದು ಸ್ಥಗಿತ ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ಡೆಟೆಕ್ಟರ್ ತಿಳಿಸಿದೆ.
11:41 AM May 15, 2024 IST | Ashitha S
ಏಕಾಏಕಿ ಫೇಸ್‌ಬುಕ್‌  ಇನ್‌ಸ್ಟಾಗ್ರಾಮ್‌ ಸರ್ವರ್‌ ಡೌನ್‌

ನವದೆಹಲಿ: ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು  ಸ್ಥಗಿತಗೊಂಡಿದೆ ಎಂದು ಟ್ರ್ಯಾಕಿಂಗ್ ವೆಬ್ಸೈಟ್ ಡೌನ್ಡೆಟೆಕ್ಟರ್ ತಿಳಿಸಿದೆ.

Advertisement

ವಿಶೇಷವೆಂದರೆ, ಈ ವರ್ಷದ ಮಾರ್ಚ್ ನಲ್ಲಿ ಸಾವಿರಾರು ಬಳಕೆದಾರರು ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಿಂದ ಏಕಾಏಕಿ ಲಾಗ್ ಔಟ್ ಆಗಿರುವ ಬಗ್ಗೆ ದೂರು ನೀಡಿದಾಗ ಮೆಟಾ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿತು.

ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಅನ್ನು ಪ್ರವೇಶಿಸುವಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿರುವ 18 ಸಾವಿರಕ್ಕೂ ಹೆಚ್ಚು ವರದಿಳು ಬಂದಿದೆ ಎಂದು ಡೌನ್ಡೆಟೆಕ್ಟರ್ ಡೇಟಾ ತೋರಿಸಿದೆ.

Advertisement

ಇನ್ನು ಯಾಕೆ ಈ ಸಮಸ್ಯೆ ಉಂಟಾಗಿದೆ ಎಂಬುದರ ಕುರಿತು ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Advertisement
Tags :
Advertisement