For the best experience, open
https://m.newskannada.com
on your mobile browser.
Advertisement

ಫೇಸ್ಬುಕ್, ಇನ್ಸ್ಟಾಗ್ರಾಮ್ ಏಕಾಏಕಿ ಲಾಗೌಟ್

ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ.
09:38 PM Mar 05, 2024 IST | Ashitha S
ಫೇಸ್ಬುಕ್  ಇನ್ಸ್ಟಾಗ್ರಾಮ್ ಏಕಾಏಕಿ ಲಾಗೌಟ್

ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ.

Advertisement

ಹೌದು..ಇಂದು ರಾತ್ರಿ 9ರ ಸುಮಾರಿಗೆ ಏಕಾಏಕಿ ಫೇಸ್​ಬುಕ್​ ಹಾಗೂ ಇನ್ಸ್ಟಾಗ್ರಾಮ್ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ​ಇದರಿಂದ ಬಳಕೆದಾರರು ಕಂಗಲಾಗಿದ್ದಾರೆ. ಇನ್ನು ಫೇಸ್ಬುಕ್​ ಪಾಸ್​ವರ್ಡ್​ ಮರೆತವರು ಪುನಃ ಲಾಗಿನ್ ಆಗುವುದಕ್ಕೆ ಪರದಾಡುವಂತಾಗಿದೆ.

ಫೇಸ್ ಬುಕ್ ಒಂದು ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿದ್ದು, ಈ ವೇದಿಕೆಯಲ್ಲಿ ವಿಶ್ವದಾದ್ಯಂತ ಬಿಲಿಯನ್ ಗಟ್ಟಲೇ ಬಳಕೆದಾರರಿದ್ದಾರೆ. ಹಾಗೇ ಪ್ರತಿದಿನ ಸಾವಿರಾಕ್ಕೂ ಅಧಿಕ ಮಂದಿ ಸೇರ್ಪಡೆಗೊಂಡು ಸೈನ್ ಇನ್ ಆಗುತ್ತಾರೆ. ಆದರೆ ಈಗ ಪರದಾಡುವಂತಾಗಿದೆ.

Advertisement

ಫೇಸ್‌ಬುಕ್‌, ಇನ್​ಸ್ಟಾಗ್ರಾಮ್ ಲಾಗ್‌ ಔಟ್ ಆಗಿರೋದು ಯಾರೋ ಒಬ್ಬರದಲ್ಲ. ವಿಶ್ವದಾದ್ಯಂತ ಎಲ್ಲರ ಅಕೌಂಟ್‌ಗಳು ಇಂದು ದಿಢೀರನೇ ಸಮಸ್ಯೆಗೆ ಸಿಲುಕಿದೆ. ಇದಕ್ಕೆ ಜಾಗತಿಕವಾಗಿ ಫೇಸ್‌ಬುಕ್‌ ಸರ್ವರ್‌ ಡೌನ್‌ ಆಗಿರೋದೇ ಕಾರಣ ಎನ್ನಲಾಗಿದೆ.

Advertisement
Tags :
Advertisement