For the best experience, open
https://m.newskannada.com
on your mobile browser.
Advertisement

ಫೇಕ್‌ ನ್ಯೂಸ್‌: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು

ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್‌ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ
12:07 PM May 04, 2024 IST | Nisarga K
ಫೇಕ್‌ ನ್ಯೂಸ್‌  ಕೋವಿಶೀಲ್ಡ್​ ಪಡೆದವರು ತಂಪುಪಾನಿಯ ಐಸ್​ ಕ್ರೀಮ್ ಸೇವಿಸಬಾರದು
ಫೇಕ್‌ ನ್ಯೂಸ್‌: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು

ಬೆಂಗಳೂರು : ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್‌ ಪಡೆದವರು ತಂಪುಪಾನಿಯ,ಐಸ್​ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ರೀತಿಯ ಸುದ್ದಿ ಸುಳ್ಳಾಗಿದ್ದು, ಇಂತಹ ಯಾವುದೇ ಸುತ್ತೋಲೆ ಇಲಾಖೆ ಹೊರಡಿಸಿಲ್ಲ. ಗಾಬರಿ ಗೊಳ್ಳದಿರಿ, ತಪ್ಪು ಮಾಹಿತಿ ಬಗ್ಗೆ ಜಾಗೃತಿ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ರೀತಿ ಸೂಚನೆ ನೀಡಿರುವ ಕಾಲೇಜುಗಳಿಗೆ ಕಾರಣ ಕೇಳಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.

Advertisement

ಆರೋಗ್ಯ ಇಲಾಖೆಯು ತಿಳಿಸಿರುವ ಮಾಹಿತಿಯ ಪ್ರಕಾರ, ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ರೀತಿಯ ಫ್ರಿಜ್​ ನೀರು, ಐಸ್​ ಕ್ರೀಮ್​ ಮತ್ತಯ ತಂಪು ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಕೊರೊನಾ ಸಂದರ್ಭದಲ್ಲಿ ಕೋವಿಶೀಲ್ಡ್​​ ಲಸಿಕೆ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು ದಿಢೀರ್​ ಹೃದಯಾಘಾತ ಸಂಭವಿಸಿ ಪ್ರಾಣ ಹಾನಿಯಾಗುತ್ತಿದೆ. ಹೀಗಾಗಿ ಮೇಲೆ ತಿಳಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು ಎಂದು ಖಾಸಗಿ ಕಾಲೇಜು ಸುತ್ತೋಲೆ ಹೊರಡಿಸಿತ್ತು.

Advertisement

ಖಾಸಗಿ ಕಾಲೇಜೊಂದು ಈ ರೀತಿಯಾಗಿ ನೋಟಿಸ್​ ಹೊರಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಹರದಾಡಲು ಆರಂಭಿಸಿತು. ಇದರಿಂದ ಎಚ್ಚತ್ತ ಆರೋಗ್ಯ ಇಲಾಖೆ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ.

Advertisement
Tags :
Advertisement