For the best experience, open
https://m.newskannada.com
on your mobile browser.
Advertisement

ಹಳಬರು ವಾಪಸ್ ಬಂದಾಗ ಕುಟುಂಬ ಬಲಿಷ್ಠವಾಗುತ್ತದೆ: ತೇಜಸ್ವಿ ಸೂರ್ಯ

ಮೋದಿ ನಾಯಕತ್ವ ಒಪ್ಪಿ ಹೊಸಬರು, ಹಿಂದೆ ಪಕ್ಷ ಬಿಟ್ಟು ಹೋದವರು ಬರ್ತಿದ್ದಾರೆ. ಒಂದು ಕುಟುಂಬದಲ್ಲಿ ಹೊಸದಾಗಿ ಸದಸ್ಯರು ಸೇರ್ಪಡೆಯಾದಾಗ ಮತ್ತು ಹಳಬರು ವಾಪಸ್ ಬಂದಾಗ ಕುಟುಂಬ ಬಲಿಷ್ಠವಾಗುತ್ತದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. 
03:17 PM Mar 25, 2024 IST | Ashika S
ಹಳಬರು ವಾಪಸ್ ಬಂದಾಗ ಕುಟುಂಬ ಬಲಿಷ್ಠವಾಗುತ್ತದೆ  ತೇಜಸ್ವಿ ಸೂರ್ಯ

ಬೆಂಗಳೂರು:  ಮೋದಿ ನಾಯಕತ್ವ ಒಪ್ಪಿ ಹೊಸಬರು, ಹಿಂದೆ ಪಕ್ಷ ಬಿಟ್ಟು ಹೋದವರು ಬರ್ತಿದ್ದಾರೆ. ಒಂದು ಕುಟುಂಬದಲ್ಲಿ ಹೊಸದಾಗಿ ಸದಸ್ಯರು ಸೇರ್ಪಡೆಯಾದಾಗ ಮತ್ತು ಹಳಬರು ವಾಪಸ್ ಬಂದಾಗ ಕುಟುಂಬ ಬಲಿಷ್ಠವಾಗುತ್ತದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯನ್ನ  ಸ್ವಾಗತ ಮಾಡಿದ್ದಾರೆ. ಇದೇ ವೇಳೆ ಹಾಸನದಲ್ಲಿ ಯಾವುದೇ ಬಂಡಾಯ ಇಲ್ಲ. ಮೈತ್ರಿಯ ನಿರ್ಧಾರವನ್ನ ಹಿರಿಯ ನಾಯಕರು ಮಾಡಿರೋದು. ಎರಡು ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಮೈತ್ರಿ ಒಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮೈತ್ರಿಯಿಂದ ರಾಜ್ಯಕ್ಕೆ ಅನುಕೂಲ ಆಗಲಿದೆ. ಮೋದಿ ನಾಯಕತ್ವ ಬಂದಾಗ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಮೈತ್ರಿ ನಮಗೆ ಅನುಕೂಲ ಆಗುತ್ತದೆ. 28 ಕ್ಷೇತ್ರ ಗೆಲ್ಲೋಕೆ ಮೈತ್ರಿ ಅನುಕೂಲವಾಗುತ್ತದೆ ಎಂದರು.

Advertisement

ಕಾಂಗ್ರೆಸ್  ಬಿಟ್ಟು ಅನೇಕ ಜನ ಬಿಜೆಪಿ ಸೇರ್ಪಡೆ ಆಗ್ತಿದ್ದಾರೆ. ನಿನ್ನೆ ನವೀನ್ ಜಿಂದಾಲ್ ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷ ಸೇರ್ಪಡೆಯಿಂದ ಪಕ್ಷವೂ ಬಲವಾಗುತ್ತದೆ. ನಮ್ಮ ಪಕ್ಷಕ್ಕೆ ಯಾರೇ ಬಂದರು ನಾವು ಸ್ವೀಕಾರ ಮಾಡ್ತೀವಿ ಎಂದು ಜನಾರ್ದನ ರೆಡ್ಡಿ ಅವರ ಸೇರ್ಪಡೆಯನ್ನು ಸ್ವಾಗತಿಸಿದರು.

Advertisement
Tags :
Advertisement