ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು ಕುತ್ತಿಗೆ ಹಿಸುಕಿ ಕೊಂದ‌ ತಂದೆ, ಅಜ್ಜಿ

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ  ಅಕ್ರಮ ಸಂಬಂಧದಿಂದ ಮಗು ಜನಿಸಿದ ಆರೋಪದ ಹಿನ್ನೆಲೆ ಮಗು ಜನಿಸುತ್ತಲೆ ತಂದೆ, ಅಜ್ಜಿ ಕುತ್ತಿಗೆ ಹಿಸುಕಿ ಕೊಂದ ಘಟನೆ ನಡೆದಿದೆ.
04:12 PM Mar 10, 2024 IST | Ashika S

ಕೊಡಗು: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ  ಅಕ್ರಮ ಸಂಬಂಧದಿಂದ ಮಗು ಜನಿಸಿದ ಆರೋಪದ ಹಿನ್ನೆಲೆ ಮಗು ಜನಿಸುತ್ತಲೆ ತಂದೆ, ಅಜ್ಜಿ ಕುತ್ತಿಗೆ ಹಿಸುಕಿ ಕೊಂದು ಮೃತ ಹಸುಗೂಸನ್ನು ಗದ್ದೆಯಲ್ಲಿ ಹೂತಿಟ್ಟ ಘಟನೆ ನಡೆದಿದೆ.

Advertisement

ತಂದೆ ಕುಮಾರ (37), ಅಜ್ಜಿ ಯಮುನಾ (57) ಕೊಲೆ ಆರೋಪಿಗಳು.

ಆರೋಪಿ ಕುಮಾರ್​ ವಿವಾಹಿತನಾಗಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇತ್ತ ಹೆರಿಗೆಗೆಂದು ಕುಮಾರನ ಪತ್ನಿ ತವರಿಗೆ ತೆರಳಿದ್ದಳು. ಇದೇ‌ ಸಂದರ್ಭ ತುಂಬು ಗರ್ಭಿಣಿ ಯುವತಿಯನ್ನ ಮನೆಗೆ ಕರೆತಂದ ಕುಮಾರ್​, ಮಗು ಜನಿಸಿದ ಬಳಿಕ‌ ತಾನೇ ಸಾಕುವುದಾಗಿ ಪ್ರೇಯಸಿಗೆ ಭರವಸೆ ನೀಡಿದ್ದಾನೆ.

Advertisement

ಬಳಿಕ ಕುಮಾರ್​ ಮನೆಯಲ್ಲಿಯೇ ಯುವತಿ ಮಗುವಿಗೆ ಜನ್ಮ‌ನೀಡಿದ್ದಾಳೆ. ಯಾವಾಗ ಯುವತಿ ಮನೆಯಿಂದ‌ ತೆರಳಿದಳೋ ತಕ್ಷಣ ಮಗುವಿನ ಹತ್ಯೆ ಮಾಡಿದ್ದಾರೆ. ಇಂದು(ಮಾ.10) ಬೆಳಗ್ಗಿನ ಜಾವ ಗದ್ದೆಯಲ್ಲಿ ಮೃತ ಹಸುಗೂಸಿನ ತಂದೆ ಕುಮಾರ್​ ಹಾಗೂ ಅಜ್ಜಿ ಜಾನಕಿ ಗುಂಡಿ ತೆಗೆದಿದ್ದಾರೆ. ಇದನ್ನ ಸ್ಥಳೀಯ ನಿವಾಸಿಗಳು ಗಮನಿಸಿ, ಶಂಕೆಯಿಂದ ಮಣ್ಣು ತೆಗೆದು ನೋಡಿದಾಗ ಗಂಡು ಮಗುವಿನ ಶವ ಪತ್ತೆಯಾಗಿದೆ.

ಆರೋಪಿಗಳನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

 

Advertisement
Tags :
crimeLatetsNewsNewsKannadaಮಗು
Advertisement
Next Article