ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

SC ST ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ; ಮತಾಂತರಗೊಂಡವರಿಗೆ ಇಲ್ಲ ಈ ಸೌಲಭ್ಯ

ಯುಜಿಸಿ ಕಡೆಯಿಂದ SC ಹಾಗು ST ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ರಿಯಾಯಿತಿ ದೊರೆತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಡಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಥವ ನೇಮಕಾತಿ ಪರೀಕ್ಷೆಗಳಿಗೆ ಈ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿ, ಕರಡು ಮಾರ್ಗಸೂಚಿ ಹೊರಡಿಸಿದೆ.
07:07 PM Jan 16, 2024 IST | Maithri S

ಬೆಂಗಳೂರು: ಯುಜಿಸಿ ಕಡೆಯಿಂದ SC ಹಾಗು ST ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ರಿಯಾಯಿತಿ ದೊರೆತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಡಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಥವ ನೇಮಕಾತಿ ಪರೀಕ್ಷೆಗಳಿಗೆ ಈ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿ, ಕರಡು ಮಾರ್ಗಸೂಚಿ ಹೊರಡಿಸಿದೆ.

Advertisement

SCಗಳಿಗೆ ಶೇ.೧೫, SCಗಳಿಗೆ ಶೇ.೭.೫, ಕೆನೆಪದರ(Creamy layer)ಕ್ಕೆ ಒಳಪಡದ OBCಗಳಿಗೆ ಶೇ.೨೭ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.೧೦ ಮೀಸಲಾತಿ ಒದಗಿಸಲಾಗಿದೆ. ವಿಕಲಾಂಗ ವಿದ್ಯಾರ್ಥಿಗಳಿಗೂ ವಿನಾಯಿತಿ ಅನ್ವಯಿಸುತ್ತದೆ.

ಈ ಕುರಿತು ಯುಜಿಸಿ ೨೦೦೬ರಲ್ಲೇ ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗಸೂಚಿ ನೀಡಿದ್ದರೂ ಅನುಸರಿಸುತ್ತಿದ್ದ ನಿಯಮಗಳಲ್ಲಿ ಸಾಮ್ಯತೆಯ ಕೊರತೆಯಿತ್ತು. ಪರಿಣಾಮವಾಗಿ ೨೦೧೯ರಲ್ಲಿ ಸಂಸತ್ತು ಅಂಗೀಕರಿಸಿದ ತಿದ್ದುಪಡಿ ಆಧರಿಸಿ ಹೊಸ ನಿಬಂಧನೆಗಳನ್ನು ಸೇರಿಸಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಲು ಜ.೩೦ನ್ನು ಕೊನೆಯ ದಿನವಾಗಿ ನಿಗದಿಪಡಿಸಲಾಗಿದೆ.

Advertisement

ನೀತಿಯ ಪ್ರಕಾರ ದಲಿತರು ಹಿಂದು, ಸಿಖ್ ಅಥವ ಬೌದ್ಧ ಧರ್ಮವನ್ನು ಬಿಟ್ಟು ಬೇರೆ ಧರ್ಮಗಳಿಗೆ ಸೇರಿದರೆ ಅಂಥವರು ಮೀಸಲಾತಿ ಸೌಭ್ಯಯದಿಂದ ವಂಚಿತರಾಗುತ್ತಾರೆ. ಮತಾಂತರಗೊಂಡವರು ತಮ್ಮ ಸ್ವಧರ್ಮಕ್ಕೆ ಮರಳಿದರೆ ಸೌಲಭ್ಯಗಳು ನಿಯಮಾನುಸಾರ ದೊರೆಯುತ್ತವೆ ಎಂದು ತಿಳಿಸಲಾಗಿದೆ.

Advertisement
Tags :
GOVERNMENTKARNATAKALatestNewsNewsKannadaUGC
Advertisement
Next Article