For the best experience, open
https://m.newskannada.com
on your mobile browser.
Advertisement

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ ಮುಂದುವರೆಸಿವೆ. ಅಲ್ಲದೇ ಒಂದು ಎರಡೂ ಕಂತುಗಳಲ್ಲೇ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದು ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ.
09:06 AM May 20, 2024 IST | Nisarga K
ಖಾಸಗಿ ಶಾಲೆಗಳಲ್ಲಿ 30  ವರೆಗೆ ಶುಲ್ಕ ಏರಿಕೆ   ಕಂಗಾಲಾದ ಪೋಷಕರು
ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

ಬೆಂಗಳೂರು : 2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ ಮುಂದುವರೆಸಿವೆ. ಅಲ್ಲದೇ ಒಂದು ಎರಡೂ ಕಂತುಗಳಲ್ಲೇ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದು ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ.

Advertisement

ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮ ಮೂರೂ ಮಾದರಿಯ ಶಾಲೆಗಳಲ್ಲೂ ಈ ಶುಲ್ಕ ಹೆಚ್ಚಳ ಮಾಡಿರುವುದಾಗಿ ಪೋಷಕರು ಹೇಳುತ್ತಿದ್ದಾರೆ.ಬೆಂಗಳೂರಿನ ರಾಜಾಜಿನಗರ, ರಾಜರಾಜೇಶ್ವರಿ ನಗರ, ಗೊರಗುಂಟೆಪಾಳ್ಯ, ಬಾಗಲಗುಂಟೆ ಸೇರಿದಂತೆ ವಿವಿಧೆಡೆ ಇರುವ ಹಲವು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಹಾಗೂ ಪೋಷಕರು ನೀಡಿದ ಮಾಹಿತಿ ಗಮನಿಸಿದಾಗ ಶೇ.20ರಿಂದ 30ರಷ್ಟು ಶುಲ್ಕ ಹೆಚ್ಚಳ ಕಂಡುಬಂದಿದೆ. ಬಜೆಟ್‌ ಶಾಲೆಗಳು ಎಂದು ಹೇಳಿಕೊಳ್ಳುವ ಆಡಳಿತ ಮಂಡಳಿಗಳು ಕನಿಷ್ಠ 25 ರಿಂದ ಗರಿಷ್ಠ 30 ಸಾವಿರ ರುಪಾಯಿ ಇದ್ದ ಶುಲ್ಕವನ್ನು ಕನಿಷ್ಠ 30 ರಿಂದ ಗರಿಷ್ಠ 35 ಸಾವಿರ ರು.ವರೆಗೂ ಏರಿಕೆ ಮಾಡಿವೆ.

Advertisement
Advertisement
Tags :
Advertisement