ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೆಂತೆ ಸೊಪ್ಪಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಮೆಂತೆ ಸೊಪ್ಪು ಅಥವಾ ಮೇತಿ ಎಂದು ಜನಪ್ರಿಯವಾಗಿ ಕರೆಯಲಾಗುವ ಇದನ್ನು ಮಸಾಲೆ ಪದಾರ್ಥಗಳಾಗಿ ಬಳಸುತ್ತಾರೆ. ಇವುಗಳ ಎಳೆಯ ಎಲೆಗಳನ್ನು ದೈನಂದಿನ ಅಡುಗೆಯಲ್ಲಿ ತರಕಾರಿ ಸೊಪ್ಪಿನ ರೀತಿ ಬಳಸಲಾಗುತ್ತದೆ. ಈ ಮೆಂತೆ ಸೊಪ್ಪು ಪ್ರೋಟೀನ್ ಖನಿಜಗಳಿಗೆ ಸಾಕಷ್ಟು ಸಮೃದ್ಧವಾಗಿದ್ದು ವಿಟಮಿನ್ ಸಿ ಯನ್ನು ಹೊಂದಿದೆ.
11:00 AM Feb 15, 2024 IST | Ashika S

ಮೆಂತೆ ಸೊಪ್ಪು ಅಥವಾ ಮೇತಿ ಎಂದು ಜನಪ್ರಿಯವಾಗಿ ಕರೆಯಲಾಗುವ ಇದನ್ನು ಮಸಾಲೆ ಪದಾರ್ಥಗಳಾಗಿ ಬಳಸುತ್ತಾರೆ. ಇವುಗಳ ಎಳೆಯ ಎಲೆಗಳನ್ನು ದೈನಂದಿನ ಅಡುಗೆಯಲ್ಲಿ ತರಕಾರಿ ಸೊಪ್ಪಿನ ರೀತಿ ಬಳಸಲಾಗುತ್ತದೆ. ಈ ಮೆಂತೆ ಸೊಪ್ಪು ಪ್ರೋಟೀನ್ ಖನಿಜಗಳಿಗೆ ಸಾಕಷ್ಟು ಸಮೃದ್ಧವಾಗಿದ್ದು ವಿಟಮಿನ್ ಸಿ ಯನ್ನು ಹೊಂದಿದೆ.

Advertisement

ಈ ಮೆಂತೆಯನ್ನು ಟ್ರಿಗೋನೆಲ್ಲ ಫೋನಮ್ ಗ್ರೇಕಮ್ ಎಂಬ ಸಸ್ಯ ಶಾಸ್ತ್ರೀಯ ಹೆಸರು ಈ ಗಿಡಕ್ಕೆ ಇದೆ. ಈ ಮೆಂತ್ಯ ಸೊಪ್ಪನ್ನ ಗಿಡಮೂಲಿಕೆಯ ಸತ್ಯವಾಗಿ ಬಳಸಲಾಗುತ್ತದೆ.

ಭಾರತದಲ್ಲಿ ಮೆಂತೆಯನ್ನು ಬೀಜಗಳಿಗಾಗಿ ವಾಣಿಜಿಕವಾಗಿ ಬಳಸಲಾಗುತ್ತದೆ. ಮೆಂತೆಯನ್ನು ಭಾರತದಲ್ಲಿ ರಾಜಸ್ಥಾನ, ತಮಿಳುನಾಡು ಗುಜರಾತ್ ಮಧ್ಯಪ್ರದೇಶ ಪಂಜಾಬ್ ಉತ್ತರ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ.

Advertisement

ಕೃಷಿ ಹವಾಮಾನ ಅವಶ್ಯಕತೆಗಳು: ಮೆಂತೆ ಬೇಸಾಯಕ್ಕೆ ಹಾಗೂ ಬೆಳವಣಿಗೆ ಅವಧಿಯ ಮಧ್ಯಂತರದಲ್ಲಿ ತಂಪಾದ ವಾತಾವರಣ ಬೇಕಾಗುತ್ತದೆ. ಹಾಗೂ ಬಿಡುವ ಮತ್ತು ಆರಂಭಿಕ ಹಂತದಲ್ಲಿ ಹಿಮ ಬೀಳುವುದರಿಂದ ಗಿಡಗಳಿಗೆ ಹಾನಿ ಉಂಟಾಗಬಹುದು. ಹೆಚ್ಚಾಗಿ ಚಳಿ ಪ್ರದೇಶದಲ್ಲಿಯೂ ಇವುಗಳ ಬೆಳವಣಿಗೆ ಕಷ್ಟಕರ.

ಮೆಂತೆ ಬೆಳವಣಿಗೆಗೆ ಮಣ್ಣಿನ ಅವಶ್ಯಕತೆ: ಮೆಂತ್ಯ ನಾ ಸಮೃದ್ಧವಾಗಿ ಸಾವಯವ ಪದಾರ್ಥಗಳೊಂದಿಗೆ ಮಣ್ಣಿನಲ್ಲಿ ಬೆಳೆಸಬಹುದು. ಉತ್ತಮ ಅವಳ ಚರಂಡಿ ಹೊಂದಿರುವ ಲೋಮ್ ಅಥವಾ ಮರುಳು ಮಿಶ್ರಿತ ಲೋಮ್ ಮಣ್ಣಿನಲ್ಲಿ ಮೆಂತೆ ಕೃಷಿ ಉತ್ತಮವಾಗಿರುತ್ತದೆ.

ಮೆಂತೆಯನ್ನು ಸೆಪ್ಟೆಂಬರ್ ಮಧ್ಯದಿಂದ ಮಾರ್ಚ್ ವರೆಗೆ ಬಿತ್ತಬೇಕು. ಬೀಜಗಳನ್ನು ಬಿತ್ತುವ ಮೊದಲು ಹೊಲದ ಮಣ್ಣನ್ನು ಚೆನ್ನಾಗಿ ತಯಾರಿಸಬೇಕು.

ಮೆಂತೆ ಗಿಡಗಳ ಬೆಳವಣಿಗೆ ನೀರಾವರಿಯ ಅವಶ್ಯಕತೆ : ಬೆತ್ತಲೆ ಪೂರ್ಣಗೊಂಡ ತಕ್ಷಣ ಲಘು ನೀರಾವರಿ ಹಾಕುವುದು ಅವಶ್ಯಕ. ನಂತರದ ನೀರಾವರಿಗಳನ್ನ 30 ಎಪ್ಪತ್ತು 85 90 150 ದಿನಗಳವರೆಗೆ ಮಿಕ್ಕಿದ ನಂತರ ನಾಲ್ಕು ನೀರಾವರಿಗಳಾಗಿ ನೀಡಲಾಗುತ್ತದೆ. ಕಾಯಿ ಮತ್ತು ಬೀಜ ಅಭಿವೃದ್ಧಿ ಹಂತದಲ್ಲಿ ಸಾಕಷ್ಟು ನೀರಾವರಿ ಒದಗಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು ನೀರಿನ ಕೊರತೆ ಸಂದರ್ಭದಲ್ಲಿ ಉತ್ತಮವಾದ ಒಳಚರಂಡಿ ನೀರನ್ನು ಒದಗಿಸಬೇಕು.

ಮೆಂತೆ ಸೊಪ್ಪಿನ ಕೊಯ್ಲು : ಮೆಂತೆ ಎಲೆಗಳು ಉದುರಲು ಪ್ರಾರಂಭಿಸಿದಾಗ ಮತ್ತು ಬೀಜಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಬೆಳೆ ಕೊಯ್ಯಲು ಉತ್ತಮ ಸಮಯ. ಅವಶ್ಯವಿದ್ದಲ್ಲಿ ಮೆಂತ್ಯ ಎಲೆಗಳನ್ನು ಸಹ ಅವು ಸೊಂಪಾಗಿ ಬೆಳೆದ ನಂತರ ಎಲೆಗಳ ನ್ನು ಕೊಯ್ಲು ಮಾಡಿ ಮಾರಾಟ ಮಾಡಬಹುದು.

ಆರೋಗ್ಯ ಪ್ರಯೋಜನಗಳು :

ಮೆಂತೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಮಧುಮೇಹವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ

ನಮ್ಮ ದೇಹವನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

ತೂಕ ಕಡಿಮೆ ಮಾಡಲು ಸಹಕಾರಿ

ಹೊಟ್ಟೆಯಲ್ಲಿ ಜೀರ್ಣಕ್ರಿಯೆಯ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.

ಆರೋಗ್ಯಕರ ಟೆಸ್ಟೋಸ್ಟೇರಾನ್ ಮಟ್ಟವನ್ನು ಉತ್ತೇಜಿಸುತ್ತದೆ

Advertisement
Tags :
AGRICULTURELatetsNewsNewsKannadaತರಕಾರಿಮೆಂತೆ ಸೊಪ್ಪು
Advertisement
Next Article