For the best experience, open
https://m.newskannada.com
on your mobile browser.
Advertisement

ಬೈಕ್ ಓವರ್ ಟೇಕ್ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೋರ್ವನನ್ನು  ಕೊಲೆ ಮಾಡಿದ ಘಟನೆ ನಡೆದಿದೆ.
01:52 PM Feb 25, 2024 IST | Ashika S
ಬೈಕ್ ಓವರ್ ಟೇಕ್ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಉತ್ತರ ಕನ್ನಡ: ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೋರ್ವನನ್ನು  ಕೊಲೆ ಮಾಡಿದ ಘಟನೆ ನಡೆದಿದೆ.

Advertisement

ಹಳಿಯಾಳ ಮೂಲದ ಪ್ರಜ್ವಲ್ ಪ್ರಕಾಶ್ ಕಕ್ಕೇರಿಕರ (24) ಹತ್ಯೆಯಾದ ಯುವಕ.

ರಸ್ತೆಯಲ್ಲಿ ತೆರಳುವಾಗ ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ಯುವಕ ಹಾಗೂ ಒಂದು ಗುಂಪಿನ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ತಾರಕಕ್ಕೆ ಏರುತ್ತಿದ್ದಂತೆ ಗುಂಪಿನಲ್ಲಿದ್ದವರು ಸೇರಿ ಯುವಕನನ್ನು ಹತ್ಯೆ ಮಾಡಿದ್ದಾರೆ.

Advertisement

ಈ ಸಂಬಂಧ ಸಾಣಾ ಮರಾಠಿ, ಅನಿಕೇತ್ ಮಿರಾಶಿ, ರಿತೇಶ್ ಪಾಟೀಲ್, ಪಾಂಡುರಂಗ ಕಳಸುರಕರ್, ಪ್ರಶಾಂತ್ ಕಲಸುರಕರ್ ಹಾಗೂ ರೂಪೇಶ್ ಕೊಲೆ ಮಾಡಿರುವ ಆರೋಪಿಗಳು ಆಗಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ.

Advertisement
Tags :
Advertisement