For the best experience, open
https://m.newskannada.com
on your mobile browser.
Advertisement

ಹೇಗಿದೆ ನೋಡಿ ಧೂಳೆಬ್ಬಿಸುತ್ತಿರುವ ‘ಫೈಟರ್​’ ಟ್ರೇಲರ್​. . .

ಈ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ‘ಫೈಟರ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ, ಅನಿಲ್​ ಕಪೂರ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇಂದು ಈ ಚಿತ್ರದ ಟ್ರೇಲರ್ ರಿಲೀಸ್​ ಆಗಿದೆ.
01:38 PM Jan 15, 2024 IST | Ashitha S
ಹೇಗಿದೆ ನೋಡಿ ಧೂಳೆಬ್ಬಿಸುತ್ತಿರುವ ‘ಫೈಟರ್​’  ಟ್ರೇಲರ್​

ಮುಂಬೈ: ಈ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ‘ಫೈಟರ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ, ಅನಿಲ್​ ಕಪೂರ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇಂದು ಈ ಚಿತ್ರದ ಟ್ರೇಲರ್ ರಿಲೀಸ್​ ಆಗಿದೆ.

Advertisement

ಭಯೋತ್ಪಾದನೆ ವಿರುದ್ಧ ಯುದ್ಧ ಸಾರುವ ಭಾರತೀಯ ವಾಯುಸೇನೆಯ ವೀರರ ಕಥೆ ಈ ಸಿನಿಮಾದಲ್ಲಿ ಇರಲಿದೆ. ಯುದ್ಧ ವಿಮಾನಗಳ ಪೈಲೆಟ್​ ಆಗಿ ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ ನಟಿಸಿದ್ದಾರೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ.

‘ಫೈಟರ್​’ ಸಿನಿಮಾಗೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶಭಕ್ತಿಯ ಕಹಾನಿ ಇರುವ ಸಿನಿಮಾ ಬಿಡುಗಡೆ ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿರುತ್ತದೆ. ಕರಣ್​ ಸಿಂಗ್​ ಗ್ರೋವರ್​, ಅಕ್ಷಯ್​ ಒಬೆರಾಯ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

‘ಫೈಟರ್​’ ಸಿನಿಮಾ ಐಮ್ಯಾಕ್ಸ್​ 3ಡಿ ವರ್ಷನ್​ನಲ್ಲೂ ಬಿಡುಗಡೆ ಆಗಲಿದೆ. ಆ ಮೂಲಕ ಪ್ರೇಕ್ಷಕರಿಗೆ ಮಸ್ತ್​ ಮನರಂಜನೆಯ ಅನುಭವ ಸಿಗಲಿದೆ.  ಟ್ರೇಲರ್​ ನೋಡಿದ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಈ ವರ್ಷದ ಬ್ಲಾಕ್​ ಬಸ್ಟರ್​ ಸಿನಿಮಾ ಆಗಲಿದೆ ಎಂದಿದ್ದಾರೆ.

Advertisement
Tags :
Advertisement