ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಆರ್‌ಸಿಬಿ: ಹೆಸರು ಚೇಂಜ್ ಮಾಡಿದ ರಿಷಬ್ ಶೆಟ್ಟಿ

ಆರ್​ಸಿಬಿ ಯಾಕೆ ಇನ್ನೂ ಕಪ್ ಗೆದ್ದಿಲ್ಲ ಅನ್ನೋ ಪ್ರಶ್ನೆ, ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಕಪ್​ ಎತ್ತುವ ಸನಿಹಕ್ಕೆ ಹೋಗಿ ಅದೆಷ್ಟೋ ಬಾರಿ ಎಡವಿದ್ದೂ ಉಂಟು.
10:50 AM Mar 13, 2024 IST | Ashitha S

ಬೆಂಗಳೂರು: ಆರ್​ಸಿಬಿ ಯಾಕೆ ಇನ್ನೂ ಕಪ್ ಗೆದ್ದಿಲ್ಲ ಅನ್ನೋ ಪ್ರಶ್ನೆ, ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಕಪ್​ ಎತ್ತುವ ಸನಿಹಕ್ಕೆ ಹೋಗಿ ಅದೆಷ್ಟೋ ಬಾರಿ ಎಡವಿದ್ದೂ ಉಂಟು.

Advertisement

ಇನ್ನೂ ಕೆಲವರು ಆರ್​ಸಿಬಿ ಎಂಬ ಹೆಸರಲ್ಲೇ ನಮಗೆ ಲಕ್ ಇಲ್ಲ. ಅದನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಇತ್ತು. ಇದೀಗ ಆರ್​​ಸಿಬಿ ಅಭಿಮಾನಿಗಳ ಮದಹಾಸೆಯನ್ನು ಫ್ರಾಂಚೈಸಿ ಈಡೇರಿಸ್ತಿದೆ. ಬೆಳ್ಳಂಬೆಳಗ್ಗೆ ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪ್ರೊಮೋ ಒಂದನ್ನು ಹರಿಬಿಟ್ಟಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಅಚ್ಚರಿಗೂ ಒಳಗಾಗಿದ್ದಾರೆ.

ಹೌದು. . ಕಾಂತಾರ ವೇಷದ ಶಿವನಾಗಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ, ಬಾರು ಕೋಲು ಹಿಡಿದು ಕೆಂಪು ಬಣ್ಣದ ಶಾಲನ್ನು ಹೆಗಲ ಮೇಲೆ ಹಾಕಿ ಎಂಟ್ರಿ ಕೊಡ್ತಾರೆ. ಅಲ್ಲಿ ಮೂರು ಕೂಣಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಅವುಗಳ ಮೇಲೆ ಕ್ರಮವಾಗಿ ರಾಯಲ್, ಚಾಲೆಂಜರ್ಸ್, ಬ್ಯಾಂಗಳೂರು (BANGALORE) ಎಂದು ಕೆಂಪು ವಸ್ತ್ರದ ಮೇಲೆ ಇಂಗ್ಲಿಷ್​​ನಲ್ಲಿ ಬರೆಯಲಾಗಿದೆ. ಅದನ್ನು ಕೋಣಗಳಿಗೆ ಹೊದಿಸಲಾಗಿದೆ. ‘ರಾಯಲ್’, ‘ಚಾಲೇಂಜರ್ಸ್​’ ಎಂದು ಬರೆದಿದ್ದ ಕೋಣಗಳ ಬೆನ್ನು ತಟ್ಟಿ ಪಾಸ್ ಮಾಡಿದ ರಿಷಬ್ ಶೆಟ್ಟಿ, BANGALORE ಎಂಬ ಕೋಣದ ಬೆನ್ನ ಮೇಲೆ ಕೈಯಿಟ್ಟು ‘ಇದು ಬೇಡ. ಭಟ್ಟರೆ, ಇದು ಬೇಡ! ತೆಗೆದುಕೊಂಡು ಹೋಗಿ’ ಎನ್ನುತ್ತಿರುವ ವಿಡಿಯೋ ಇದಾಗಿದೆ.

Advertisement

ನಂತರ ಒಂದು ನೋಟ ಬೀರುವ ರಿಷಬ್ ಶೆಟ್ಟಿ ‘ಅರ್ಥ ಆಯ್ತಾ..’ ಎಂದು ಪ್ರಶ್ನೆ ಮಾಡ್ತಾರೆ. ಈ ವಿಡಿಯೋ ಪೋಸ್ಟ್​ ಮಾಡಿರುವ ಆರ್​ಸಿಬಿ ‘ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?’ ಎಂದು ಪ್ರಶ್ನೆ ಮಾಡಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಎಂಬ ಹೆಸರಿನಲ್ಲೇ ದೋಷ ಇದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಈ ದೋಷವನ್ನು ನಿವಾರಿಸಿ ‘ಈ ಸಲ ಕಪ್’ ಎತ್ತಲು ಮುಂದಾಗಿರುವ ಫ್ರಾಂಚೈಸಿ ತನ್ನ ಹೆಸರನ್ನು ಬದಲಾವಣೆ ಮಾಡಲಿದೆ. Royal Challengers Bangalore ಇದ್ದ ಹೆಸರು Royal Challengers Bengaluru ಎಂದಾಗಲಿದೆ. ಕನ್ನಡದಲ್ಲಿ ‘ಬೆಂಗಳೂರು’ ಎಂದು ಹೇಳುವಂತೆ, ಇಂಗ್ಲಿಷ್​​ನಲ್ಲೂ ಬೆಂಗಳೂರು ಎಂದು ಹೇಳಲಾಗುತ್ತದೆ ಮತ್ತು ಬರೆಯಲಾಗುತ್ತದೆ. ಅಂದರೆ BANGALORE ಬದಲಾಗಿ ‘BENGALURU’ ಎಂದು ಹೆಸರು ಬದಲಾಗಲಿದೆ. ಇದನ್ನು ಮಾರ್ಚ್​ 19 ರಂದು ಆರ್​ಸಿಬಿ ಅನ್​ಬಾಕ್ಸ್ ಮಾಡಲಿದೆ.

Advertisement
Tags :
BANGALORECHALLENGERSindiaLatestNewsNewsKannadaRCBROYALರಿಷಬ್ ಶೆಟ್ಟಿ
Advertisement
Next Article