ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವಿರುದ್ಧ ಎಫ್ಐಆರ್ ದಾಖಲು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅನುಮತಿ ಪಡೆದ ಮಾರ್ಗವನ್ನು ಬಿಟ್ಟು, ಬೇರೆ ಮಾರ್ಗದಿಂದ ಯಾತ್ರೆ ಹೊರಟಿದ್ದರೆ ಎಂದು, ಅಸ್ಸಾ ಪೊಲೀಸರು, ನ್ಯಾಯ ಯಾತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
11:48 AM Jan 19, 2024 IST | Ashitha S

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅನುಮತಿ ಪಡೆದ ಮಾರ್ಗವನ್ನು ಬಿಟ್ಟು, ಬೇರೆ ಮಾರ್ಗದಿಂದ ಯಾತ್ರೆ ಹೊರಟಿದ್ದರೆ ಎಂದು, ಅಸ್ಸಾ ಪೊಲೀಸರು, ನ್ಯಾಯ ಯಾತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ಅಸ್ಸಾಂನ ಜರ್ಹತ್ ನಗರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಯ ಯಾತ್ರೆಯ ತಂಡ, ಯಾವ ಮಾರ್ಗದಿಂದ ಹೋಗಬೇಕು ಎಂದು ಅನುಮತಿ ಕೋರಿದ್ದರೋ, ಅದನ್ನು ಬಿಟ್ಟು ಬೇರೆ ಮಾರ್ಗದಿಂದ, ನ್ಯಾಯ ಯಾತ್ರೆಗಾಗಿ ಸಾಗಿದ್ದಾರೆ. ಈ ವೇಳೆ ಆ ಮಾರ್ಗದಲ್ಲಿ ಪೊಲೀಸ್ ಬಂದೋಬಸ್ತ್ ಇಲ್ಲದೇ, ಅಲ್ಲಿನವರಿಗೆ ಈ ವಿಷಯ ಗೊತ್ತಿಲ್ಲದೇ, ಆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ರಾಹುಲ್ ಗಾಂಧಿಯನ್ನು ಕಂಡು, ಜನ ಏಕಾಏಕಿ ಮುಗಿಬಿದ್ದು, ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದೆ.

ಈ ಕಾರಣಕ್ಕೆ ಜೋರ್ಹತ್ ಪೊಲೀಸ್ ಠಾಣೆಯಲ್ಲಿ ಯಾತ್ರೆ, ಮತ್ತು ಕಾರ್ಯಕ್ರಮವನ್ನು ನಿಯೋಜನೆ ಮಾಡಿದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

Advertisement

Advertisement
Tags :
BJPCongressGOVERNMENTindiaLatestNewsNewsKannadaಎಫ್‌ಐಆರ್‌ನವದೆಹಲಿನ್ಯಾಯ್ ಯಾತ್ರೆಸಂಸದ ರಾಹುಲ್ ಗಾಂಧಿ
Advertisement
Next Article