For the best experience, open
https://m.newskannada.com
on your mobile browser.
Advertisement

ರೈಲು‌ ನಿಲ್ದಾಣದಲ್ಲಿ ಅಗ್ನಿ ಅವಘಡ : ಹೊತ್ತಿ ಉರಿದ ಬೋಗಿ ಕಂಟೈನರ್‌

ರೈಲು‌ ನಿಲ್ದಾಣದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಬೋಗಿ ಕಂಟೈನರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಯಶವಂತಪುರದಲ್ಲಿರುವ ರೈಲ್ವೆ ನಿಲ್ದಾಣ ಪ್ಲಾಟ್ ಫಾರಂ 6ರಲ್ಲಿ ದುರ್ಘಟನೆ ಸಂಭವಿಸಿದೆ.
04:59 PM Mar 26, 2024 IST | Nisarga K
ರೈಲು‌ ನಿಲ್ದಾಣದಲ್ಲಿ ಅಗ್ನಿ ಅವಘಡ   ಹೊತ್ತಿ  ಉರಿದ ಬೋಗಿ ಕಂಟೈನರ್‌
ರೈಲು‌ ನಿಲ್ದಾಣದಲ್ಲಿ ಅಗ್ನಿ ಅವಘಡ : ಹೊತ್ತಿ ಉರಿದ ಬೋಗಿ ಕಂಟೈನರ್‌

ಬೆಂಗಳೂರು: ರೈಲು‌ ನಿಲ್ದಾಣದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಎರಡು ಬೋಗಿ ಕಂಟೈನರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಯಶವಂತಪುರದಲ್ಲಿರುವ ರೈಲ್ವೆ ನಿಲ್ದಾಣ ಪ್ಲಾಟ್ ಫಾರಂ 6ರಲ್ಲಿ ದುರ್ಘಟನೆ ಸಂಭವಿಸಿದೆ.

Advertisement

ಒಂದು ಬೋಗಿಯಲ್ಲಿ ಕ್ಯಾಂಟೀನ್ ನಡೆಸಲಾಗ್ತಿತ್ತು. ಮತ್ತೊಂದು ಬೋಗಿಯಲ್ಲಿ ತರಕಾರಿ, ಧಾನ್ಯಗಳನ್ನ ಸ್ಟೋರ್ ಮಾಡಿಕೊಂಡು ಇಡಲಾಗಿತ್ತು. ತರಕಾರಿ, ಧಾನ್ಯಗಳನ್ನು ತುಂಬಿದ್ದ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳು ದೌಡಾಯಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ‌ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Advertisement
Advertisement
Tags :
Advertisement