For the best experience, open
https://m.newskannada.com
on your mobile browser.
Advertisement

ಅಗ್ನಿ ಅವಘಡ : ಸ್ಕ್ರಾಪ್ ಗೋದಾಮಿಗೆ ಬೆಂಕಿ: 2 ಟ್ರಾಕ್ಟರ್, ಬೈಕ್ ಬೆಂಕಿಗಾಹುತಿ

ನಗರದ ಪರಪ್ಪನ ಅಗ್ರಹಾರದ ಬಳಿ ಇರುವ ಸ್ಕ್ರಾಪ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರಿ ನಷ್ಟ ತಂದಿದೆ.ಈ ಘಟನೆ ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ ಎನ್ನಲಾಗಿದೆ.
05:01 PM Apr 10, 2024 IST | Nisarga K
ಅಗ್ನಿ ಅವಘಡ   ಸ್ಕ್ರಾಪ್ ಗೋದಾಮಿಗೆ ಬೆಂಕಿ  2 ಟ್ರಾಕ್ಟರ್  ಬೈಕ್ ಬೆಂಕಿಗಾಹುತಿ
ಅಗ್ನಿ ಅವಘಡ : ಸ್ಕ್ರಾಪ್ ಗೋದಾಮಿಗೆ ಬೆಂಕಿ: 2 ಟ್ರಾಕ್ಟರ್, ಬೈಕ್ ಬೆಂಕಿಗಾಹುತಿ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರದ ಬಳಿ ಇರುವ ಸ್ಕ್ರಾಪ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರಿ ನಷ್ಟ ತಂದಿದೆ.ಈ ಘಟನೆ ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ ಎನ್ನಲಾಗಿದೆ.

Advertisement

ಬೆಂಕಿ 5 ಎಕರೆ ಗೋದಾಮನ್ನು ಭಸ್ಮ ಮಾಡಿದೆ ಅಲ್ಲದೇ ಈ ಘಟನೆಯಲ್ಲಿ ಎರಡು ಟ್ರಾಕ್ಟರ್, ಒಂದು ಟಾಟಾ ಎಸ್ ಮತ್ತು ಬೈಕ್ ಬೆಂಕಿಗಾಹುತಿಯಾಗಿದೆ. ಈ ಹಿಂದೆ ಇದು ವಲಸಿಗರು ವಾಸವಿದ್ದ ಜಾಗಾವಾಗಿತ್ತು ತದ ನಂತರ ಅಕ್ರಮವಾಗಿ ಜಾಗ ಪಡೆದು ಗೋದಾಮು ಪ್ರಾರಂಭಿಸಲಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ 8 ಅಗ್ನಿಶಾಮಕ ದಳ ಧಾವಿಸಿದ್ದು ಸತತವಾಗಿ 10 ಗಂಟೆಗಳ ಕಾರ್ಯಾಚರಣೆ ನಡೆಸಿದ ನಂತರ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.

Advertisement

Advertisement
Tags :
Advertisement