For the best experience, open
https://m.newskannada.com
on your mobile browser.
Advertisement

ಬೆಂಕಿ ಅವಘಡ : ಕೆನಡಾದಲ್ಲಿ ಭಾರತೀಯ ಮೂಲದ ಮೂವರು ಸಾವು

ಒಟ್ಟಾರಿಯೊದಲ್ಲಿರುವ ಒಂದು ಮನೆಯಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡಿದ್ದು ಭಾರತೀಯ ಮೂಲದ ಮೂವರು ಬೆಂಕಿಗಾಹುತಿಯಾಗಿದ್ದಾರೆ. ಈ ಘಟನೆ ಮಾರ್ಚ್‌ 7ರಂದು ನೆಡದಿದೆ ಎಂದು ಹೇಳಲಾಗಿದೆ.
10:05 AM Mar 16, 2024 IST | Nisarga K
ಬೆಂಕಿ ಅವಘಡ   ಕೆನಡಾದಲ್ಲಿ ಭಾರತೀಯ ಮೂಲದ ಮೂವರು ಸಾವು
ಬೆಂಕಿ ಅವಘಡ : ಕೆನಡಾದಲ್ಲಿ ಭಾರತೀಯ ಮೂಲದ ಮೂವರು ಸಾವು

ಕೆನಡಾ : ಒಟ್ಟಾರಿಯೊದಲ್ಲಿರುವ ಒಂದು ಮನೆಯಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡಿದ್ದು ಭಾರತೀಯ ಮೂಲದ ಮೂವರು ಬೆಂಕಿಗಾಹುತಿಯಾಗಿದ್ದಾರೆ. ಈ ಘಟನೆ ಮಾರ್ಚ್‌ 7ರಂದು ನೆಡದಿದೆ ಎಂದು ಹೇಳಲಾಗಿದೆ.

Advertisement

ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಅವರಿಗೆ ಮೂರು ಅವಶೇಷಗಳು ಪತ್ತೆಯಾಗಿದ್ದು ರಾಜೀವ್ ವಾರಿಕೂ (51), ಅವರ ಪತ್ನಿ ಶಿಲ್ಪಾ ಕೋಥಾ (47) ಮತ್ತು ಅವರ ಮಗಳು ಮಾಹೆಕ್ ವಾರಿಕೂ (16) ಮೃತರು ಎಂದು ಗುರುತಿಸಲಾಗಿದೆ. ಈ ಕುಟುಂಬವು ಬ್ರಾಂಪ್ಟನ್‌ನ ಬಿಗ್ ಸ್ಕೈ ವೇ ಮತ್ತು ವ್ಯಾನ್ ಕಿರ್ಕ್ ಡ್ರೈವ್ ಪ್ರದೇಶದಲ್ಲಿ ವಾಸಿಸುತ್ತಿತ್ತು

ಇನ್ನೂ ಈ ಬೆಂಕಿ ಅವಘಡಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ, ಹಾಗಾಗಿ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Advertisement
Tags :
Advertisement