For the best experience, open
https://m.newskannada.com
on your mobile browser.
Advertisement

ಪಾರಾದಲ್ಲಿ ಅಗ್ನಿ ಅವಘಡ: ಒಂಬತ್ತು ಮಂದಿ ಸಜೀವ ದಹನ

ಬ್ರೆಜಿಲ್‌ನ  ಉತ್ತರ ರಾಜ್ಯವಾದ ಪಾರಾದಲ್ಲಿ ಭೂರಹಿತ ಕಾರ್ಮಿಕ ಚಳವಳಿ ಎಂಎಸ್‌ಟಿಗೆ ಸೇರಿದ ಶಿಬಿರದಲ್ಲಿ ಶನಿವಾರ ರಾತ್ರಿ ಸಂಭವಿಸಿದ  ಅಗ್ನಿ ಅವಘಡದಲ್ಲಿ ಸಂಭವಿಸಿದೆ.
08:00 AM Dec 11, 2023 IST | Ashika S
ಪಾರಾದಲ್ಲಿ ಅಗ್ನಿ ಅವಘಡ  ಒಂಬತ್ತು ಮಂದಿ ಸಜೀವ ದಹನ

ಸಾವೊ ಪಾಲೊ: ಬ್ರೆಜಿಲ್‌ನ  ಉತ್ತರ ರಾಜ್ಯವಾದ ಪಾರಾದಲ್ಲಿ ಭೂರಹಿತ ಕಾರ್ಮಿಕ ಚಳವಳಿ ಎಂಎಸ್‌ಟಿಗೆ ಸೇರಿದ ಶಿಬಿರದಲ್ಲಿ ಶನಿವಾರ ರಾತ್ರಿ ಸಂಭವಿಸಿದ  ಅಗ್ನಿ ಅವಘಡದಲ್ಲಿ ಸಂಭವಿಸಿದೆ.

Advertisement

ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಒಂಬತ್ತು ಮಂದಿ ಸಜೀವ ದಹನರಾಗಿದ್ದಾರೆ.

ಎಂಎಸ್‌ಟಿ ಪ್ರಕಾರ, ಪಾರಾಪೇಬಾಸ್ ಪಟ್ಟಣದಲ್ಲಿರುವ ಗ್ರಾಮೀಣ ರೈತರ ಶಿಬಿರದಲ್ಲಿ ಇಂಟರ್ನೆಟ್ ವೈರಿಂಗ್ ಕಾಮಗಾರಿ ವೇಳೆ ಶಾರ್ಟ್ ಸರ್ಕ್ಯೂಟ್‌ ಆಗಿ ಕೆಲವು ಗುಡಿಸಲುಗಳಿಗೆ ಬೆಂಕಿ ತಗುಲಿ ಈ ದುರ್ಘಟನೆ ಸಂಭವಿಸಿದೆ.

Advertisement

ಘಟನೆಯಲ್ಲಿ ಮೃತಪಟ್ಟ ಒಂಬತ್ತು ಮಂದಿಯಲ್ಲಿ ಆರು ಮಂದಿ ಶಿಬಿರದಲ್ಲಿದ್ದವರಾಗಿದ್ದು, ಉಳಿದ ಮೂವರು ಇಂಟರ್ನೆಟ್ ಕಂಪನಿಯ ಉದ್ಯೋಗಿಗಳಾಗಿದ್ದಾರೆ.

ಎಂಟು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಏಳು ಮಂದಿ ಈಗಾಗಲೇ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರವಾಗಿ ಗಾಯಗೊಂಡ ಒಬ್ಬರಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement
Tags :
Advertisement