ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಗ್ನಿ ಅವಘಡ: ಶೆಡ್ ನಲ್ಲಿದ್ದ ಕಾರು, ಬೈಕ್ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಭಸ್ಮ

ಬೈಂದೂರು ತಾಲೂಕಿನ ಶಿರೂರಿನ ಬುಖಾರಿ ಕಾಲನಿಯ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಕಾರು, ದ್ವಿಚಕ್ರ ವಾಹನ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿದೆ.
05:05 PM Nov 23, 2023 IST | Ashika S

ಉಡುಪಿ: ಬೈಂದೂರು ತಾಲೂಕಿನ ಶಿರೂರಿನ ಬುಖಾರಿ ಕಾಲನಿಯ ಮನೆಯೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಕಾರು, ದ್ವಿಚಕ್ರ ವಾಹನ ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳು ಸುಟ್ಟು ಭಸ್ಮವಾಗಿದೆ.

Advertisement

ಬುಖಾರಿ ಕಾಲನಿಯ ಸಿನಾ ಫರ್ಹಿನ್ ಎಂಬವರಿಗೆ ಸೇರಿದ ಮನೆಯಲ್ಲಿ ಬುಧವಾರ ತಡರಾತ್ರಿ 1:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬೆಂಕಿಯ ರೌದ್ರಾವತಾರಕ್ಕೆ ಮನೆಗೆ ತಾಗಿಕೊಂಡಿರುವ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಮತ್ತು ಬೈಕ್ ಸುಟ್ಟು ಕರಕಲಾಗಿದೆ.

ಮನೆಯೊಳಗೆ ಅಳವಡಿಸಿದ್ದ ಏರ್ ಕಂಡಿಶನರ್, ಮನೆಯ ಗೋಡೆ ಮತ್ತು ಪೈಪ್ ಲೈನ್, ಕಿಟಕಿ, ಗಾಜುಗಳಿಗೆ ಮತ್ತು ಕೋಣೆಯಲ್ಲಿದ್ದ ಮರದ ಮಂಚ, ಬೆಡ್ ಗೆ ಹಾನಿಯುಂಟಾಗಿದೆ. ಅಂದಾಜು 16.70 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Tags :
LatetsNewsNewsKannadaಅವಘಡಆಕಸ್ಮಿಕದ್ವಿಚಕ್ರ ವಾಹನಬೆಂಕಿಬೈಂದೂರು
Advertisement
Next Article