For the best experience, open
https://m.newskannada.com
on your mobile browser.
Advertisement

ಸಿಂಗಸಂದ್ರದಲ್ಲಿ ಅಗ್ನಿ ಅವಘಡ: 5 ಕೋಟಿ ಮೌಲ್ಯದ ಬಟ್ಟೆ, 40 ಬೈಕ್ ಭಸ್ಮ

ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದಲ್ಲಿ ಮಧ್ಯರಾತ್ರಿ ಸುಮಾರಿಗೆ ಮಣಿಪಾಲ್ ಕಂಟ್ರಿ ರೋಡ್ ನಲ್ಲಿರೋ ಟಿಂಬರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
08:48 AM Apr 24, 2024 IST | Ashika S
ಸಿಂಗಸಂದ್ರದಲ್ಲಿ ಅಗ್ನಿ ಅವಘಡ  5 ಕೋಟಿ ಮೌಲ್ಯದ ಬಟ್ಟೆ  40 ಬೈಕ್ ಭಸ್ಮ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದಲ್ಲಿ ಮಧ್ಯರಾತ್ರಿ ಸುಮಾರಿಗೆ ಮಣಿಪಾಲ್ ಕಂಟ್ರಿ ರೋಡ್ ನಲ್ಲಿರೋ ಟಿಂಬರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Advertisement

ಮಧ್ಯರಾತ್ರಿ 12.30ರ ಸುಮಾರಿಗೆ ಮೊದಲಿಗೆ ಮರದ ಪೀಸ್ ಗಳನ್ನು ಇಟ್ಟಿದ್ದ ಟಿಂಬರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಎಡ ಭಾಗದಲ್ಲಿದ್ದ ಕಾರ್ ವಾಶ್ ಸರ್ವಿಸ್ ನ ಕಾರುಗಳಿಗೆ ಬೆಂಕಿ ತಗುಲಿದೆ. ಜೊತೆಗೆ ಬಲಭಾಗದಲ್ಲಿದ್ದ ಗ್ಯಾರೇಜ್ ಗೂ ಬೆಂಕಿ ತಗುಲಿದೆ.

ಇದರಿಂದ ಕಾರ್ ವಾಶ್ ಸರ್ವಿಸ್ ನಲ್ಲಿದ್ದ 2 ಕಾರುಗಳು, ಗ್ಯಾರೇಜ್ ನಲ್ಲಿದ್ದ 1 BMW ಕಾರು, 1 ಟಾಟಾ ಏಸ್, ಸುಮಾರು 40ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗಾಹುತಿಯಾಗಿವೆ.

Advertisement

3 ಗಂಟೆ ಸುಮಾರಿಗೆ ಟಿಂಬರ್ ನಿಂದ 100 ಮೀ ಹಿಂದಿದ್ದ lovable Sport ಎಂಬ ಹೆಸರಿನ ಗಾರ್ಮೆಂಟ್ಸ್ ಫ್ಯಾಕ್ಟರಿಯ ನಾಲ್ಕನೇ ಫ್ಲೋರ್ ನಲ್ಲಿದ್ದ ಬಟ್ಟೆ ಸ್ಟೋರೇಜ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟಿಂಬರ್ ಬಳಿ ಉರಿಯುತ್ತಿದ್ದ ಬೆಂಕಿಯಿಂದ ಕಿಡಿ ಹಾರಿ ಗಾರ್ಮೆಂಟ್ಸ್ ಗೆ ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗಾರ್ಮೆಂಟ್ಸ್ 4ನೇ ಫ್ಲೋರ್ ನಲ್ಲಿದ್ದ 5 ಕೋಟಿಗೂ ಅಧಿಕ ಮೌಲ್ಯದ ಬಟ್ಟೆಗಳು ಬೆಂಕಿಗೆ ಆಹುತಿಯಾಗಿವೆ.

ತಕ್ಷಣವೇ 5 ಅಗ್ನಿಶಾಮಕ ದಳ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಮುಂಜಾನೆಯವರೆಗೂ ಅಗ್ನಿ ನಂದಿಸಿದ್ದಾರೆ.

Advertisement
Tags :
Advertisement