ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮೇಲೆ ವಿಮಾನ ಪತನ: ಪೈಲಟ್ ಸಾವು

ವಿಮಾನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಚಿಲಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಿಲಿಯ ಪಂಗುಲೆಮೊ ವಿಮಾನ ನಿಲ್ದಾಣ (ಟಿಎಲ್‌ಎಕ್ಸ್) ಬಳಿ ವಿಮಾನ ಪತನಗೊಂಡಿದೆ. ಮೃತ ಪೈಲಟ್ ಅನ್ನು ಸ್ಪೇನ್ ವಾರ್ಡ್ ಫರ್ನಾಂಡೋ ಸೋಲನ್ಸ್ ರೋಬಲ್ಸ್ (58) ಎಂದು ಗುರುತಿಸಲಾಗಿದೆ.
04:29 PM Jan 17, 2024 IST | Ashitha S

ಚಿಲಿ: ವಿಮಾನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಚಿಲಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಚಿಲಿಯ ಪಂಗುಲೆಮೊ ವಿಮಾನ ನಿಲ್ದಾಣ (ಟಿಎಲ್‌ಎಕ್ಸ್) ಬಳಿ ವಿಮಾನ ಪತನಗೊಂಡಿದೆ. ಮೃತ ಪೈಲಟ್ ಅನ್ನು ಸ್ಪೇನ್ ವಾರ್ಡ್ ಫರ್ನಾಂಡೋ ಸೋಲನ್ಸ್ ರೋಬಲ್ಸ್ (58) ಎಂದು ಗುರುತಿಸಲಾಗಿದೆ.

Advertisement

ಜನವರಿ 15 ರಂದು ಸಂಜೆ 4:30 ರ ಸುಮಾರಿಗೆ ಐರೆಸ್ ಟರ್ಬೊ ಟ್ರಶ್ ವಿಮಾನವು ಬೆಂಕಿ ನಿಯಂತ್ರಣ ಕಾರ್ಯಾಚರಣೆಗಳನ್ನು ನಡೆಸುತ್ತಿರುವಾಗ ನಿಯಂತ್ರಣವನ್ನು ಕಳೆದುಕೊಂಡಿತು. ಆದರೆ ಹೆದ್ದಾರಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ವಿಮಾನ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ.

ನಂತರ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮೇಲೆ ವಿಮಾನದ ಅವಶೇಷಗಳು ಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ. ಚಿಲಿಯ ಕೃಷಿ ಸಚಿವಾಲಯ ಪೈಲಟ್‌ನ ಸಾವನ್ನು ದೃಢಪಡಿಸಿದೆ. ಮೃತರು ರಾಷ್ಟ್ರೀಯ ಅರಣ್ಯ ನಿಗಮದಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

Advertisement

ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗ್ತಿವೆ.

Advertisement
Tags :
indiaLatestNewsNewsKannadaPOLICEಪೈಲಟ್ವಿಮಾನ ನಿಲ್ದಾಣವಿಮಾನ ಪತನ
Advertisement
Next Article