For the best experience, open
https://m.newskannada.com
on your mobile browser.
Advertisement

ಹಸನ್ಮುಖಿ ಬಾಹುಬಲಿಗೆ ಮೊದಲ ದಿನದ ಮಹಾ ಮಜ್ಜನ ಸಂಪನ್ನ

ಹಸನ್ಮುಖಿ ಬಾಹುಬಲಿಗೆ ಮೊದಲ ದಿನದ ಮಹಾ ಮಜ್ಜನ ನೆನ್ನೆದಿನ ಸಂಪನ್ನವಾಗಿದೆ. ದ. ಕ ಜಿಲ್ಲೆಯ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಮಹಾ ಮಸ್ತಕಾಭಿಷೇಕ ಸಂಭ್ರಮ ಎಲ್ಲೆಡೆ ಮನೆಮಾಡಿತ್ತು.
10:28 AM Feb 23, 2024 IST | Ashika S
ಹಸನ್ಮುಖಿ ಬಾಹುಬಲಿಗೆ ಮೊದಲ ದಿನದ ಮಹಾ ಮಜ್ಜನ ಸಂಪನ್ನ

ವೇಣೂರು: ಹಸನ್ಮುಖಿ ಬಾಹುಬಲಿಗೆ ಮೊದಲ ದಿನದ ಮಹಾ ಮಜ್ಜನ ನೆನ್ನೆದಿನ ಸಂಪನ್ನವಾಗಿದೆ. ದ. ಕ ಜಿಲ್ಲೆಯ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಮಹಾ ಮಸ್ತಕಾಭಿಷೇಕ ಸಂಭ್ರಮ ಎಲ್ಲೆಡೆ ಮನೆಮಾಡಿತ್ತು.

Advertisement

12 ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕ ನಿನ್ನೆಯಿಂದ ಆರಂಭಗೊಂಡಿದೆ. ದೇಶದ 4 ಏಕ ಶಿಲಾ ಗೊಮ್ಮಟ ಮೂರ್ತಿಗಳ ಪೈಕಿ ಒಂದಾಗಿರುವ 35 ಅಡಿ ಎತ್ತರದ ವೇಣೂರು ಬಾಹುಬಲಿ ಮೂರ್ತಿಗೆ ಎಳನೀರು, ಇಕ್ಷುರಸ, ಕ್ಷೀರ, ಕಲ್ಕ ಚೂರ್ಣ, ಅರಶಿನ, ಗಂಧ, ಮುಂತಾದ ದ್ರವ್ಯಗಳಿಂದ ಅಭಿಷೇಕ ನಡೆಯಿತು.

ಇನ್ನು ಈ ಕಾರ್ಯಕ್ರಮ ಮಾರ್ಚ್ 1 ರವರೆಗೂ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಅಜಿಲ ಸೀಮೆ ಅರಸರಾದ ಪದ್ಮಪ್ರಸಾದ್ ಅಜಿಲರು ಸೇರಿದಂತೆ ಗಣ್ಯಾತೀತರು ಭಾಗಿಯಾಗಿದ್ದರು.

Advertisement

Advertisement
Tags :
Advertisement