ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಹಮದ್ ನಿಲ್ದಾಣಕ್ಕೆ ಮೊದಲ ಸ್ಥಾನ

ವಿಶ್ವದ ಅತ್ಯತ್ತಮ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಈ ಬಾರಿ ದೋಹಾದ ಹಮದ್‌ ನಿಲ್ದಾಣ ಮೊದಲ ಸ್ಥಾನದ ಕಿರೀಟ ಮುಡಿಗೇರಿಸಿಕೊಂಡಿದೆ ಹಾಗೂ ಸಿಂಗಾಪುರದ ಚಾಂಗಿ ನಿಲ್ದಾಣ 2ನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ ಹಮದ್‌ ನಿಲ್ದಾಣ ಚಾಂಗಿ ನಿಲ್ದಾಣವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ. ವಿಷೇಶ ಸಂಗತಿ ಎಂದರೆ ಈ ಪಟ್ಟಿಯಲ್ಲಿ ಅಗ್ರ ಐದು ವಿಮಾನ ನಿಲ್ದಾಣಗಳಲ್ಲಿ ಏಷ್ಯಾ ಪ್ರಾಬಲ್ಯ ಹೊಂದಿದೆ.
02:25 PM Apr 18, 2024 IST | Nisarga K
ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಹಮದ್ ನಿಲ್ದಾಣಕ್ಕೆ ಮೊದಲ ಸ್ಥಾನ

ಕತ್ತಾರ್‌:  ವಿಶ್ವದ ಅತ್ಯತ್ತಮ ವಿಮಾನ ನಿಲ್ದಾಣ ಪಟ್ಟಿಯಲ್ಲಿ ಈ ಬಾರಿ ದೋಹಾದ ಹಮದ್‌ ನಿಲ್ದಾಣ ಮೊದಲ ಸ್ಥಾನದ ಕಿರೀಟ ಮುಡಿಗೇರಿಸಿಕೊಂಡಿದೆ ಹಾಗೂ ಸಿಂಗಾಪುರದ ಚಾಂಗಿ ನಿಲ್ದಾಣ 2ನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ ಹಮದ್‌ ನಿಲ್ದಾಣ ಚಾಂಗಿ ನಿಲ್ದಾಣವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದೆ. ವಿಷೇಶ ಸಂಗತಿ ಎಂದರೆ ಈ ಪಟ್ಟಿಯಲ್ಲಿ ಅಗ್ರ ಐದು ವಿಮಾನ ನಿಲ್ದಾಣಗಳಲ್ಲಿ ಏಷ್ಯಾ ಪ್ರಾಬಲ್ಯ ಹೊಂದಿದೆ.

Advertisement

ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕತಾರ್ ರಾಜಧಾನಿ ದೋಹಾದ ಪ್ರಮುಖ ವಿಮಾನ ನಿಲ್ದಾಣವಾಗಿದೆ. 600,000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಈ ವಿಮಾನ ನಿಲ್ದಾಣವು 75 ಫುಟ್‌ಬಾಲ್ ಮೈದಾನಗಳಿಗೆ ಸಮಾನವಾಗಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಈ ನಿಲ್ದಾಣ ಈ ಬಾರಿ ಮೊದಲ ಸ್ಥಾನ ಪಡೆದಿದೆ.

ಇನ್ನು ದಕ್ಷಿಣ ಕೊರಿಯಾದ ಸಿಯೋಲ್ ಇಂಚಿಯಾನ್ ವಿಮಾನ ನಿಲ್ದಾಣವು ಮೂರನೇ ಸ್ಥಾನದಲ್ಲಿದೆ.ಟೋಕಿಯೊದ ಹನೇಡಾ ನಾಲ್ಕನೇ ಸ್ಥಾನದಲ್ಲಿದ್ದು, ನರಿಟಾ ಐದನೇ ಸ್ಥಾನದಲ್ಲಿದ್ದಾರೆ. ಹಾಗೆ ಭಾರತದ ನಾಲ್ಕು ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಟಾಪ್‌ 100 ರ ಸ್ಥಾನದಲ್ಲಿದೆ. ಹಾಂಗ್‌ ಕಾಂಗ್‌ ವಿಮಾನ ನಿಲ್ದಾನ ಈ ಬಾರಿ 22 ರಿಂದ 11ನೇ ಸ್ಥಾನಕ್ಕೆ ಬಂದು ನಿಂತಿದೆ.

Advertisement

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನ ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣ 6ನೇ ಸ್ಥಾನ
ದುಬೈ 7ನೇ ಸ್ಥಾನದಲ್ಲಿದೆ
ಜರ್ಮನಿಯ ಮ್ಯೂನಿಚ್ ಎಂಟನೇ ಸ್ಥಾನದಲ್ಲಿ
ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ಒಂಬತ್ತನೇ ಸ್ಥಾನ
ಟರ್ಕಿಯ ಇಸ್ತಾನ್‌ಬುಲ್ ವಿಮಾನ ನಿಲ್ದಾಣ ಹತ್ತನೇ ಸ್ಥಾನ
ಅಮೆರಿಕದ ಸಿಯಾಟಲ್-ಟಕೋಮಾ ವಿಮಾನ ನಿಲ್ದಾಣವು 24 ನೇ ಸ್ಥಾನ

 

Advertisement
Tags :
AIRPORTFIRST PLACELatestNewsNewsKarnatakaQATARworld
Advertisement
Next Article