For the best experience, open
https://m.newskannada.com
on your mobile browser.
Advertisement

ಸಿಯಾಚಿನ್ ಗ್ಲೇಸಿಯರ್‌ನ 15 ಸಾವಿರ ಅಡಿ ಎತ್ತರದಲ್ಲಿ ನಿಯೋಜನೆಗೊಂಡ ಮೊದಲ ಮಹಿಳೆ

ಕ್ಯಾಪ್ಟನ್ ಫಾತಿಮಾ ವಾಸಿಂ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣೆ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
12:30 PM Dec 11, 2023 IST | Ashitha S
ಸಿಯಾಚಿನ್ ಗ್ಲೇಸಿಯರ್‌ನ 15 ಸಾವಿರ ಅಡಿ ಎತ್ತರದಲ್ಲಿ ನಿಯೋಜನೆಗೊಂಡ ಮೊದಲ ಮಹಿಳೆ

ಗುವಾಹಟಿ: ಕ್ಯಾಪ್ಟನ್ ಫಾತಿಮಾ ವಾಸಿಂ ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕಾರ್ಯಾಚರಣೆ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಉತ್ತರ ಭಾರತದ ಸಿಯಾಚಿನ್ ಗ್ರೇಸಿಯರ್ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾಗಿದೆ. ಇದು ಇಂಡೋ-ಪಾಕ್ ನಿಯಂತ್ರಣ ರೇಖೆಯ ಸಮೀಪದಲ್ಲಿದೆ. ಇದರ ಎತ್ತರ 20,062 ಅಡಿ. ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಹಿಮನದಿ ಇಲ್ಲಿ ಹರಿಯುತ್ತದೆ. ಈಗ ದೇಶದ ಹೆಣ್ಣು ಮಕ್ಕಳನ್ನೂ ಸಿಯಾಚಿನ್‌ನಲ್ಲಿ ನಿಯೋಜಿಸಲಾಗುತ್ತಿದೆ.

ಹೌದು ಭಾರತೀಯ ವಾಯುಪಡೆಯು ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಮ್ ಅವರನ್ನು ಸಿಯಾಚಿನ್‌ನಲ್ಲಿ 15,200 ಅಡಿ ಎತ್ತರದಲ್ಲಿ ನಿಯೋಜಿಸಲಾಗಿದೆ. ಸಿಯಾಚಿನ್ ಗ್ರೇಸಿಯರ್‌ನಲ್ಲಿ ಕಾರ್ಯಾಚರಣಾ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Advertisement

ಮಹಿಳಾ ಕ್ಯಾಪ್ಟನ್ ಫಾತಿಮಾ ವಾಸಿಂ ಅವರು ಸಿಯಾಚಿನ್ ಗ್ರೇಸಿಯರ್‌ನಲ್ಲಿ ಕಾರ್ಯಾಚರಣಾ ಪೋಸ್ಟ್‌ಗೆ ನೇಮಕಗೊಂಡ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿಯಾಗಿದ್ದಾರೆ. ಫಾತಿಮಾ ಅವರನ್ನು 15,200 ಅಡಿ ಎತ್ತರದಲ್ಲಿ ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಭಾರತೀಯ ಸೇನೆಯ ಫೈರ್ ಅಂಡ್ ಪ್ಯೂರಿ ಕಾರ್ಪ್ಸ್ ಕೂಡ ಕ್ಯಾಪ್ಟನ್ ಫಾತಿಮಾ ವಾಸಿಮ್‌ಗೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಸಿಯಾಚಿನ್ -ವಾರಿಯರ್ಸ್‌ನ ಕ್ಯಾಪ್ಟನ್ ಫಾತಿಮಾ ವಾಸಿಮ್ ಅವರು ಸಿಯಾಚಿನ್ ಗ್ರೇಸಿಯರ್‌ನಲ್ಲಿನ ಕಾರ್ಯಾಚರಣಾ ಹುದ್ದೆಗೆ ನೇಮಕಗೊಂಡ ಮೊದಲ ವೈದ್ಯಕೀಯ ಅಧಿಕಾರಿಯಾಗಿದ್ದಾರೆ. ಕ್ಯಾಪ್ಟನ್ ಫಾತಿಮಾ ವಾಸಿಮ್ ಅವರನ್ನು 15 ಸಾವಿರ ಅಡಿ ಎತ್ತರದಲ್ಲಿ ನಿಯೋಜಿಸಿರುವುದು ಅವರ ಅದಮ್ಯ ಮನೋಭಾವ ಮತ್ತು ಹೆಚ್ಚಿನ ಪ್ರೇರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬರೆಯಲಾಗಿದೆ.

Advertisement
Tags :
Advertisement