ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

 ಭ್ರೂಣ  ಹತ್ಯೆ ಕೇಸ್: ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದ ಸಚಿವ ಗುಂಡೂರಾವ್‌

ಭ್ರೂಣ ಹತ್ಯೆ ಕೇಸ್ ಆರೋಪವಿದ್ದ ವೈದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ನಾನು ಎಲ್ಲಾ ಕಡೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
11:45 AM Dec 02, 2023 IST | Ramya Bolantoor

ಮಂಗಳೂರು: ಭ್ರೂಣ ಹತ್ಯೆ ಕೇಸ್ ಆರೋಪವಿದ್ದ ವೈದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ನಾನು ಎಲ್ಲಾ ಕಡೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಸೇರಿ ಹಲವರ ಬಳಿ ನಾನು ಮಾಹಿತಿ ಪಡೆದಿದ್ದೆ. ಎಲ್ಲದರ ನಂತರ ಸಿಎಂಗೆ ಸಿಐಡಿ ತನಿಖೆ ಕೊಡಲು ಮನವಿ ಮಾಡಿದೆ.ಆ ಬಳಿಕ ಸಿಐಡಿ ತನಿಖೆಗೆ ಸಿಎಂ ಆದೇಶ ಮಾಡಿದ್ದಾರೆ ಎಂದರು. ಲೋಪವಾದ ಕಾರಣ ಇಬ್ಬರು ಅಧಿಕಾರಿಗಳ ಅಮಾನತು ನಡೆದಿದೆ.ಈ ಸತೀಶ್ ಬಗ್ಗೆಯೂ ಮಾಹಿತಿ ಬಂತು, ಅವರು ಇದರಲ್ಲಿ ಶಾಮೀಲಾಗಿದ್ದಾರೆ. ಆದರೆ ಅವರು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆದರೆ ಯಾಕೆ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಇಲ್ಲ. ಈ ಪ್ರಕರಣಕ್ಕೂ ಸತೀಶ್ ಆತ್ಮಹತ್ಯೆಗೂ ಲಿಂಕ್ ಇದ್ಯಾ‌ ನೋಡಬೇಕು. ಸತೀಶ್ ಕೂಡ ನಮ್ಮ ಆಯುಷ್ ಅಧಿಕಾರಿ, ಅವರ ಮೇಲೆ ಆರೋಪ ಕೇಳಿ ಬಂದಿದೆ.

ಆಯುಷ್ ಅಧಿಕಾರಿ ಆಗಿದ್ದರೂ ಅಲೋಪತಿ ಪ್ರಾಕ್ಟಿಸ್ ಮಾಡ್ತಿದ್ದರು. ಇವರ ಮೇಲೆ ಸಾಕಷ್ಟು ಆರೋಪ ಇದೆ, ಮೈಸೂರಲ್ಲೂ ದೂರುಗಳಿತ್ತು. ನಮ್ಮ ಇಲಾಖೆಯ ಅನೇಕ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ.ಆದರೆ ಅದೆಲ್ಲ ತನಿಖೆಯಲ್ಲಿ ಗೊತ್ತಾಗಬೇಕು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಅವರ ಆತ್ಮಹತ್ಯೆ ಯಾಕಾಗಿದೆ ಗೊತ್ತಿಲ್ಲ, ಇದಕ್ಕೂ ಅದಕ್ಕೂ ಸಂಬಂಧ ಇದ್ಯಾ ಗೊತ್ತಿಲ್ಲ. ಹೀಗಾಗಿ ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಪೊಲೀಸ್ ಇಲಾಖೆ ಮತ್ತು ಸಿಐಡಿ ಈ ಬಗ್ಗೆ ಸಮಗ್ರ ತನಿಖೆ‌ ನಡೆಸಲಿದೆ.

Advertisement

ಈ ಭ್ರೂಣ ಹತ್ಯೆ‌ ತಡೆಯಲು ಕಠಿಣ ಕಾನೂನು ಅವಶ್ಯವಿದೆ. ಕಾನೂನಿನಲ್ಲಿ ಬದಲಾವಣೆ ಆಗಬೇಕಾ ಎಂಬ ಬಗ್ಗೆ ಚಿಂತನೆ ನಡೆಸಲಾಗ್ತಿದೆ. ಸ್ಕ್ಯಾನಿಂಗ್ ಸೆಂಟರ್ ಸೇರಿ ಹಲವು ಕಡೆ ಪರಿಶೀಲನೆ ಆಗಬೇಕಿದೆ.ಅದರ ಜೊತೆಗೆ ಕೆಲವು ಗುಪ್ತಚರ ಮಾಹಿತಿ ಕಲೆ ಹಾಕಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ಆರೋಗ್ಯ ಇಲಾಖೆ ಕೂಡ ಭಾಗಿಯಾಗಬೇಕಿದೆ ಎಂದು ಹೇಳಿದರು.

Advertisement
Tags :
CongressKARNATAKALatetsNewsminsterNewsKannadaದಿನೇಶ್ ಗುಂಡೂರಾವ್ಮಂಗಳೂರು
Advertisement
Next Article