For the best experience, open
https://m.newskannada.com
on your mobile browser.
Advertisement

ಚಳಿಗಾಲದಲ್ಲಿ ಆರೋಗ್ಯವನ್ನು ಉತ್ತಮವಾಗಿರಿಸಲು ಈ ಆಹಾರಗಳನ್ನು ಸೇವಿಸಿ

ಋತುಮಾನಗಳು ಬದಲಾದಂತೆ ಹೊಸ ಋತುಮಾನಕ್ಕೆ ದೇಹ ಹೊಂದಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
01:31 PM Jan 12, 2024 IST | Ramya Bolantoor
ಚಳಿಗಾಲದಲ್ಲಿ ಆರೋಗ್ಯವನ್ನು ಉತ್ತಮವಾಗಿರಿಸಲು ಈ   ಆಹಾರಗಳನ್ನು ಸೇವಿಸಿ

ಋತುಮಾನಗಳು ಬದಲಾದಂತೆ ಹೊಸ ಋತುಮಾನಕ್ಕೆ ದೇಹ ಹೊಂದಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅಲ್ಲದೆ ಋತುಮಾನಕ್ಕೆ ತಕ್ಕ ಹಾಗೆ ನಮ್ಮ ಆಹಾರ ಪದ್ಧತಿಯೂ ಬದಲಾಗಬೇಕು. ಹಾಗಾಗಿ ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಗುಣವಿರಬೇಕು. ಅಂತಹ ಆಹಾರಗಳ   ಆಯ್ಕೆಯನ್ನು ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು.

Advertisement

ಚಳಿಗಾಲದಲ್ಲಿ ದೊರೆಯುವ ಹಣ್ಣುಗಳು ಸಹ ಕೈಗೆಟಕುವ ಬೆಲೆಯಲ್ಲಿಯೇ ಇರುತ್ತದೆ. ಅಂತಹ ಹಣ್ಣುಗಳನ್ನು ತಪ್ಪದೆ ಸವಿಯಬೇಕು. ಅದರಲ್ಲೂ ಪಪ್ಪಾಯ, ಪ್ಯಾಂಪಲ್ ಮೌಸ್, ಸಿಟ್ರಿಕ್ ಹಣ್ಣುಗಳು, ಕಲ್ಲಂಗಡಿ, ದ್ರಾಕ್ಷಿ, ಗೂಸ್‍ಬೆರ್ರೀಸ್, ಪೇರಲೆ, ಕಿವಿ ಮತ್ತು ದಾಳಿಂಬೆ ಹಣ್ಣು ಚಳಿಗಾಲಕ್ಕೆ ಅತ್ಯುತ್ತಮವಾಗಿರುತ್ತದೆ. ಈ ಹಣ್ಣುಗಳಲ್ಲಿ ಸಾಕಷ್ಟು ಜೀವಸತ್ವಗಳಿರುತ್ತವೆ. ಅವು ಆರೋಗ್ಯ ವೃದ್ಧಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಕೆಲವು ಗಿಡಮೂಲಿಕೆಗಳು ಮತ್ತು ಮಸಾಲ ಪದಾರ್ಥಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ಕಾಡಾ, ಪುದೀನ, ತುಳಸಿ, ಲೆಮನ್ ಗ್ರಾಸ್, ಪೆಪ್ಪರ್ ಪುಡಿ ನಮ್ಮ ಆರೋಗ್ಯವನ್ನು ಉತ್ತಮ ಹಾಗೂ ಬೆಚ್ಚಗಿಡಲು ಸಹಾಯ ಮಾಡುವುದು.

Advertisement

ಚಳಿಗಾಲದಲ್ಲಿ ಬ್ರೊಕೋಲಿ ಮತ್ತು ಶುಂಠಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವು ಚಳಿಗಾಲದಲ್ಲಿ ಉಂಟಾಗುವ ಶೀತ ಮತ್ತು ಜ್ವರಗಳನ್ನು ತಡೆಯುತ್ತವೆ. ಜೊತೆಗೆ ವಾತಾವರಣದಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಉಂಟಾಗುವ ರೋಗಗಳಿಂದ ರಕ್ಷಣೆ ನೀಡುವುದು. ಸೊಪ್ಪುಗಳಲ್ಲಿ ಪಾಲಕ್ ಮತ್ತು ಅರುಗುಲಾ ಉತ್ತಮ ಪೋಷಣೆ ನೀಡುವುದು.

Advertisement
Tags :
Advertisement