ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಿಡಿಲು ಬಡಿದು ಮೈದಾನದಲ್ಲೇ ಫುಟ್ಬಾಲ್​ ಆಟಗಾರ ಸಾವು !

ಮೈದಾನದಲ್ಲಿ ಫುಟ್ಬಾಲ್​ ಆಡುತ್ತಿದ್ದ ವೇಳೆ ಸಿಡಿಲು ಬಡಿದ ಘಟನೆಯೊಂದು ದೃಶ್ಯ ಸಮೇತ ವೈರಲ್​ ಆಗಿದೆ. ಇಂಡೋನೇಷ್ಯಾದ ಸಿಲಿವಾಂಗಿ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಡಿಲು ಬಡಿಯುವ ದೃಶ್ಯ ಹರಿದಾಡುತ್ತಿದೆ.
01:20 PM Feb 13, 2024 IST | Ashitha S

ಇಂಡೋನೇಷ್ಯಾ: ಮೈದಾನದಲ್ಲಿ ಫುಟ್ಬಾಲ್​ ಆಡುತ್ತಿದ್ದ ವೇಳೆ ಸಿಡಿಲು ಬಡಿದ ಘಟನೆಯೊಂದು ದೃಶ್ಯ ಸಮೇತ ವೈರಲ್​ ಆಗಿದೆ. ಇಂಡೋನೇಷ್ಯಾದ ಸಿಲಿವಾಂಗಿ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಡಿಲು ಬಡಿಯುವ ದೃಶ್ಯ ಹರಿದಾಡುತ್ತಿದೆ.

Advertisement

ಸಿಡಿಲು ಬಡಿದ ವೇಳೆ ಆಟಗಾರ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ಕುಸಿತದ ಬಳಿಕ ಕೊಂಚ ಹೊತ್ತು ಉಸಿರಾಡಿದ್ದು, ಬಳಿಕ ಸಾವನ್ನಪ್ಪಿದ್ದಾನೆ. ಟ್ವಿಟ್ಟರ್​ನಲ್ಲಿ ಸಿಡಿಲು ಬಡಿಯುವ ಭಯಾನಕ ದೃಶ್ಯ ಹರಿದಾಡುತ್ತಿದೆ.

ವರದಿಗಳ ಪ್ರಕಾರ, ಫೆಬ್ರವರಿ 10ರಂದು ನಡೆ ಘಟನೆ ಇದಾಗಿದೆ, ಪಶ್ಚಿಮ ಜಾವಾದ ಬಮಡಂಗ್​ನಲ್ಲಿರುವ ಸಿಲಿವಾಂಗಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಪಂದ್ಯ ಏರ್ಪಡಿಸಲಾಗಿತ್ತು. ಈ ಪಂದ್ಯದ ವೇಳೆ ಏಕಾಏಕಿ ಮಳೆ ಪ್ರಾರಂಭವಾಗಿತ್ತು. ಮಳೆ ಪ್ರಾರಂಭವಾದಂತೆ ಆಟಗಾರನಿಗೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ರಭಸಕ್ಕೆ ಆಟಗಾರನ ಜೆರ್ಸಿಯು ಸುಟ್ಟು ಕರಕಲಾಗಿದೆ. ಆಟಗಾರರನನ್ನು ಸರಿನಿಂಗ್ಸಿಹ್​​ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.

Advertisement

 

Advertisement
Tags :
deathfootballindonesiaLatestNewslightningstruckNewsKannadaಇಂಡೋನೇಷ್ಯಾ
Advertisement
Next Article