ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಕ್ಷಯ ಪಾತ್ರ ಫೌಂಡೇಶನ್ ಗೆ, ಎನ್‌ಟಿಟಿ ಡೇಟಾ ಬೆಂಬಲ

07 ಫೆಬ್ರವರಿ 2024– ಜಾಗತಿಕ ಡಿಜಿಟಲ್ ವ್ಯಾಪಾರ ಮತ್ತು ಐಟಿ ಸೇವೆಗಳ ಅಗ್ರಗಣ್ಯ ಕಂಪನಿಯಾದ ಎನ್‌ಟಿಟಿ ಡೇಟಾ, ಬೆಂಗಳೂರಿನ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿನ 1,000 ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಒದಗಿಸಲು ನೆರವನ್ನು ನೀಡುತ್ತಿದೆ ಎಂದು ಅಕ್ಷಯಪಾತ್ರ ಸಂತೋಷದಿಂದ ಘೋಷಿಸಿದೆ.
06:55 PM Feb 07, 2024 IST | Ashika S

ಮಂಗಳೂರು: 07 ಫೆಬ್ರವರಿ 2024– ಜಾಗತಿಕ ಡಿಜಿಟಲ್ ವ್ಯಾಪಾರ ಮತ್ತು ಐಟಿ ಸೇವೆಗಳ ಅಗ್ರಗಣ್ಯ ಕಂಪನಿಯಾದ ಎನ್‌ಟಿಟಿ ಡೇಟಾ, ಬೆಂಗಳೂರಿನ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿನ 1,000 ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಒದಗಿಸಲು ನೆರವನ್ನು ನೀಡುತ್ತಿದೆ ಎಂದು ಅಕ್ಷಯಪಾತ್ರ ಸಂತೋಷದಿಂದ ಘೋಷಿಸಿದೆ.

Advertisement

ಪ್ರತಿಷ್ಠಿತ ಪ್ರಧಾನಮಂತ್ರಿ ಪೋಷಣ್ ಉಪಕ್ರಮದ ಅನುಷ್ಠಾನ ಪಾಲುದಾರರಾದ ಈ ಪ್ರತಿಷ್ಠಾನದೊಂದಿಗಿನ  ಸಹಯೋಗವು ಅಪೌಷ್ಟಿಕತೆಯನ್ನು ಎದುರಿಸುವ ಮತ್ತು ಕರ್ನಾಟಕದಾದ್ಯಂತ ಇರುವ ಸಮುದಾಯಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಬದ್ಧತೆಯನ್ನು ಸಾರುತ್ತದೆ.

ಎನ್‌ಟಿಟಿ ಡೇಟಾ ತಮ್ಮ ಪ್ರಾಯೋಜಕತ್ವದ ಭಾಗವಾಗಿ 40 ಸೌರ ಬೀದಿದೀಪಗಳು, 20 ಮೋಲ್ಡ್ ಮಾಡಿದ ಮಣೆಗಳು ಮತ್ತು 80 ತರಕಾರಿ ಕ್ರೇಟ್‌ಗಳನ್ನು ಕೊಡುಗೆಯಾಗಿ ನೀಡಿದೆ.

Advertisement

ಪ್ರತಿ ಶಾಲಾ ದಿನ 35,000 ಮಕ್ಕಳಿಗೆ ಊಟವನ್ನು ಒದಗಿಸುವ ಮಂಗಳೂರಿನಲ್ಲಿರುವ ಅಕ್ಷಯ ಪಾತ್ರದ ಆಧುನಿಕ ಅಡುಗೆ ಮನೆಯನ್ನು ಸಜ್ಜುಗೊಳಿಸಲು ಈ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಅಕ್ಷಯ ಪಾತ್ರ ಫೌಂಡೇಶನ್‌ನ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ) ಸಾಧನೆಗೆ ಎನ್‌ಟಿಟಿ ಡೇಟಾ ತನ್ನ ಬೆಂಬಲವನ್ನು ನೀಡಿದೆ. ಈ ಮೂಲಕ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಿ, ಅದರ ಕಾರ್ಯಾಚರಣೆಗಳ ದಕ್ಷತೆಯನ್ನು ಸುಧಾರಿಸಲಾಗುತ್ತದೆ ಮತ್ತು ಆ ಮೂಲಕ ಫೌಂಡೇಶನ್‌ಗೆ ಪ್ರಯೋಜನವನ್ನು ಒದಗಿಸಲಾಗುತ್ತದೆ.

"ಶಾಲಾ ಮಕ್ಕಳಿಗೆ ಹಸಿವನ್ನು ಹೋಗಲಾಡಿಸುವಲ್ಲಿ ಅಕ್ಷಯ ಪಾತ್ರ ಫೌಂಡೇಶನ್‌ನ ಕ್ರಾಂತಿಕಾರಕ ಪ್ರಯಾಣಕ್ಕೆ ಜೊತೆಯಾಗಲು ಸಂತೋಷ ಪಡುತ್ತೇವೆ ಮತ್ತು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತೇವೆ. ಭವಿಷ್ಯದ ಪೀಳಿಗೆಯ ಯೋಗಕ್ಷೇಮಕ್ಕೆ ಪೌಷ್ಟಿಕ ಆಹಾರ ಮತ್ತು ಶುದ್ಧ ಗಾಳಿ ಸಮಾನವಾಗಿ ಮುಖ್ಯವಾಗಿದೆ.

ಈ ನೆರವು ಮಕ್ಕಳ ಜೀವನವನ್ನು ಸುಧಾರಿಸಲು ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಲಿದೆ" ಎಂದು ಎನ್‌ಟಿಟಿ ಡೇಟಾ ಸರ್ವೀಸಸ್ ನ ಇಂಡಿಯಾ ಮತ್ತು ಎಪಿಜೆಯ ಮಾರ್ಕೆಟಿಂಗ್ ಉಪಾಧ್ಯಕ್ಷ ಅಂಕುರ್ ದಾಸ್‌ಗುಪ್ತ ಹೇಳಿದರು.

ಸಿಇಓ .ಶ್ರೀಧರ್ ವೆಂಕಟ್ ಅವರು ಈ ಸಹಯೋಗದ ಕುರಿತು, " ಎನ್‌ಟಿಟಿ ಡೇಟಾ ಸಂಸ್ಥೆಯ ಉದಾರ ಬೆಂಬಲವು ಪೌಷ್ಠಿಕಾಂಶದ ಊಟವನ್ನು ಒದಗಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ. ನಮ್ಮ ಅತ್ಯಾಧುನಿಕ ಅಡುಗೆಮನೆಗೆ ಪ್ರಮುಖ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ನಮ್ಮ ಸುಸ್ಥಿರತೆಯ ಗುರಿ ಸಾಧನೆ ಸಾಧ್ಯವಾಗಿಸುತ್ತ" ಎಂದು ಹೇಳಿದರು.

Advertisement
Tags :
LatetsNewsNewsKannadaಅಕ್ಷಯಪಾತ್ರಅನುದಾನಿತ ಶಾಲೆಊಟಎನ್‌ಟಿಟಿ ಡೇಟಾಮಧ್ಯಾಹ್ನ
Advertisement
Next Article