ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರಲ್ಲಿ ವಿದೇಶಿ ಮಹಿಳೆ ನಿಗೂಢ ಸಾವು !

 ವಿದೇಶಿ ಮೂಲದ ಮಹಿಳೆ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಜ್ಬೇಕಿಸ್ತಾನದ ಜರೀನಾ ಎಂಬ ವಿದೇಶಿ ಮಹಿಳೆ ಮೃತ ದುದ್ರೈವಿ.
08:07 AM Mar 14, 2024 IST | Ashitha S

ಬೆಂಗಳೂರು: ವಿದೇಶಿ ಮೂಲದ ಮಹಿಳೆ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಜ್ಬೇಕಿಸ್ತಾನದ ಜರೀನಾ ಎಂಬ ವಿದೇಶಿ ಮಹಿಳೆ ಮೃತ ದುದ್ರೈವಿ.

Advertisement

ನಾಲ್ಕು ದಿನಗಳ ಹಿಂದೆ ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಮಹಿಳೆ ಬಿಡಿಎ ಮೇಲ್ಸೇತುವೆ ಬಳಿಯ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಳು. ಹೋಟೆಲ್​ನ ಎರಡನೇ ಮಹಡಿಯಲ್ಲಿ ಕೊಠಡಿಯಲ್ಲಿ ವಾಸವಿದ್ದಳು. ಆದರೆ ನಿನ್ನೆ ಸಂಜೆಯಿಂದ ಯಾವುದೇ ಪ್ರತಿಕ್ರಿಯೆ ಮಹಿಳೆ ಕಡೆಯಿಂದ ಸಿಕ್ಕಿರಲಿಲ್ಲ. ಇದರಿಂದ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಮೂಲಕ ರೂಮ್​ ತೆರೆದಿದ್ದಾರೆ. ಈ ವೇಳೆ ಪರಿಶೀಲಿಸಿದಾಗ ಮಹಿಳೆ ಮೃತ ದೇಹ ಪತ್ತೆಯಾಗಿದೆ.

ದೇಹದ ಮೇಲೆ ಗಾಯದ ಕಲೆಗಳು ಪತ್ತೆಯಾಗಿದ್ದು, ಯಾರೋ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ , ಶೇಷಾದ್ರಿಪುರಂ ಪೊಲೀಸರು ಸಿಸಿಟಿವಿ ಹಾಗೂ ಲೆಡ್ಜರ್ ಬುಕ್ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Advertisement
Tags :
crimedeathGOVERNMENTindiaKARNATAKALatestNewsNewsKannadaPOLICEಬೆಂಗಳೂರು
Advertisement
Next Article