For the best experience, open
https://m.newskannada.com
on your mobile browser.
Advertisement

ಮಧ್ಯ ಚಿಲಿಯಲ್ಲಿ ‘ಕಾಡ್ಗಿಚ್ಚು’: 46 ಕ್ಕೂ ಹೆಚ್ಚು ಮಂದಿ ಸಾವು

ಮಧ್ಯ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚಿನ ಪರಿಣಾಮ ಕನಿಷ್ಠ 46 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ.
09:40 AM Feb 04, 2024 IST | Ashitha S
ಮಧ್ಯ ಚಿಲಿಯಲ್ಲಿ ‘ಕಾಡ್ಗಿಚ್ಚು’  46 ಕ್ಕೂ ಹೆಚ್ಚು ಮಂದಿ ಸಾವು

ಚಿಲಿ: ಮಧ್ಯ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚಿನ ಪರಿಣಾಮ ಕನಿಷ್ಠ 46 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ.

Advertisement

ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಿವಾಸಿಗಳು ವಾಸಿಸುವ ವಾಲ್ಪಾರೈಸೊ ಎನ್ನುವ ಪ್ರದೇಶದಲ್ಲಿ ಕಾಡ್ಗಿಚ್ಚು ಹರಡಿದ್ದು, ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್ ಮತ್ತು ಟ್ರಕ್‌ಗಳನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.

ಪ್ರವಾಸಿ ನಗರವಾದ ವಿನಾ ಡೆಲ್ ಮಾರ್ ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ರಕ್ಷಣಾ ತಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬೆಂಕಿ ತೀವ್ರವಾಗಿ ಹರಡುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಇದು ಕಳೆದ ದಶಕದಲ್ಲಿ ಚಿಲಿಯಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚು ಎಂದು ಚಿಲಿಯ ವಿಪತ್ತು ಸಂಸ್ಥೆ ಸೆನಾಪ್ರೆಡ್ ಹೇಳಿದೆ.

Advertisement
Tags :
Advertisement