ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

'ಪೋಕ್ಸೋ' ಪ್ರಕರಣದ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇರೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.ಈ ಕುರಿತು ಸುದ್ದಿಗಾರರ ಜೊತೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದರು.
11:10 AM Mar 15, 2024 IST | Ashitha S

ಬೆಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇರೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.ಈ ಕುರಿತು ಸುದ್ದಿಗಾರರ ಜೊತೆ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿದರು.

Advertisement

'ಸಮಸ್ಯೆ ಹೇಳಿಕೊಂಡು ತಾಯಿ-ಮಗಳು ಅನೇಕ ಬಾರಿ ನನ್ನ ಬಳಿ ಬಂದು ಹೋಗುತ್ತಿದ್ದರು.

ಕಣ್ಣೀರು ಹಾಕುತ್ತಿದ್ದಾರೆ ಅಂತ ಒಳಗಡೆ ಕರೆದು ಸಮಸ್ಯೆ ಕೇಳಿದೆ, ತುಂಬಾ ಅನ್ಯಾಯ ಆಗಿದೆ ಅಂತ ಹೇಳಿದರು. ನಾನು ಪೊಲೀಸ್ ಕಮಿಷನರ್ ಅವರಿಗೆ ಕಾಲ್ ಮಾಡಿ ಅನ್ಯಾಯ ಆಗಿದೆ ನ್ಯಾಯ ಕೊಡಿಸಿ ಎಂದು ಕಮಿಷನರ್ ಹತ್ತಿರ ಕಳುಹಿಸಿಕೊಟ್ಟಿದ್ದೇನೆ, ಇದಾದ ನಂತರ ನನ್ನ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡೋಕೆ ಶುರು ಮಾಡಿದರು” ಎಂದರು.

Advertisement

”ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂಬುದು ತಿಳಿದು ಬಂದಿದೆ. ಉಪಕಾರ ಮಾಡಿದ್ರೆ ಈಗ ನನ್ನ ಮೇಲೆ ಹೀಗೆ ಮಾಡಿದ್ದಾರೆ. ಅಲ್ಲದೇ ಪಾಪ ಹೆಣ್ಣು ಮಗಳು ಅಂತ ಹಣದ ಸಹಾಯ ಕೂಡ ಮಾಡಿದೆ. ಯಾರಿಗೂ ಉಪಕಾರ ಮಾಡಬಾರದು, ಮಾಡಿದ್ರೆ ಹೀಗೆ ಮಾಡ್ತಾರೆ. ನೋಡೋಣ ಎಲ್ಲವನ್ನು ಎದುರಿಸೋಣ ಬಿಡಿ..ಇಂತಹದ್ದೆನ್ನೆಲ್ಲಾ ನಾನು ನಿರೀಕ್ಷೆ ಮಾಡಿರಲಿಲ್ಲ. ಇದು ರಾಜಕೀಯ ಪ್ರೇರಿತ ಘಟನೆ ಎಂದು ನಾನು ಹೇಳುವುದಕ್ಕೆ ಇಷ್ಟ ಪಡಲ್ಲ” ಎಂದರು.

ಇನ್ನು ಪೋಕ್ಸೋ ಪ್ರಕರಣದಲ್ಲಿ ದಾಖಲಾದರೆ, ಆರೋಪಿ ಎಷ್ಟೇ ಪ್ರಭಾವಿ ಆಗಿದ್ದರೂ ಕೂಡಲೇ‌ ಬಂಧಿಸಬೇಕು. ನಂತರ ತನಿಖೆ‌ ನಡೆಸಬೇಕೆಂದು ಕಾನೂನಿನಲ್ಲಿ ಹೇಳಿರುವುದಾಗಿ ತಜ್ಞರು ಹೇಳುತ್ತಾರೆ. ಹೀಗಾಗಿ, ಯಡಿಯೂರಪ್ಪ ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಗಳಿವೆ.

Advertisement
Tags :
BJPbsycrimeGOVERNMENTindiaKARNATAKALatestNewsNewsKannadaಬೆಂಗಳೂರು
Advertisement
Next Article