For the best experience, open
https://m.newskannada.com
on your mobile browser.
Advertisement

ಭಾರತ ತಂಡದ ಮಾಜಿ ಕೋಚ್‌ ಮನೆ ಮೇಲೆ ದಾಳಿ: ಕೋಟಿ ರೂ. ಪತ್ತೆ..!

ಟೀಮ್ ಇಂಡಿಯಾದ ಮಾಜಿ ಕೋಚ್ ತುಷಾರ್ ಅರೋಥೆ ಮನೆಯಲ್ಲಿ 1 ಕೋಟಿ ರೂ. ಮೊತ್ತ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
01:23 PM Mar 05, 2024 IST | Gayathri SG
ಭಾರತ ತಂಡದ ಮಾಜಿ ಕೋಚ್‌ ಮನೆ ಮೇಲೆ ದಾಳಿ  ಕೋಟಿ ರೂ  ಪತ್ತೆ

ಟೀಮ್ ಇಂಡಿಯಾದ ಮಾಜಿ ಕೋಚ್ ತುಷಾರ್ ಅರೋಥೆ ಮನೆಯಲ್ಲಿ 1 ಕೋಟಿ ರೂ. ಮೊತ್ತ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Advertisement

ವಡೋದರದ ಪತ್ಪರ್‌ಗಂಜ್ ಪ್ರದೇಶದಲ್ಲಿರುವ ತುಷಾರ್ ಅರೋಥೆ ಅವರ ಮನೆ ಮೇಲೆ ದಾಳಿ ನಡೆಸಿದ ವೇಳೆ ಪೊಲೀಸರಿಗೆ ಒಂದು ಕೋಟಿ ರೂ. ಲಭಿಸಿದೆ. ಈ ಹಣ ಹೇಗೆ ಬಂತು, ಎಲ್ಲಿಂದ ಬಂತು, ಇದರ ಮೂಲ ಯಾವುದು, ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ಕೋಚ್‌ ನೀಡಿಲ್ಲ ಎನ್ನಲಾಗುತ್ತಿದೆ.

ಈ ಕುರಿತು ವಡೋದರಾ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹಣದ ಮೂಲದ ಬಗ್ಗೆ ಅರೋಥೆ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಮನೆಯ ಮೇಲೆ ದಾಳಿ ನಡೆಸಿ ಬೂದು ಬಣ್ಣದ ಬ್ಯಾಗ್‌ನಲ್ಲಿಟ್ಟಿದ್ದ ಒಟ್ಟು ಮೊತ್ತ 1.01 ಕೋಟಿ ರೂಪಾಯಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Advertisement
Tags :
Advertisement