For the best experience, open
https://m.newskannada.com
on your mobile browser.
Advertisement

ಮಂಗಳೂರು: ಹರ್ಷ ಸಮೂಹ ಸಂಸ್ಥೆಯ 17ನೇ ಮಳಿಗೆ ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಮಂಗಳೂರು: ಹರ್ಷ ಸಂಸ್ಥೆ ಗ್ರಾಹಕ ಸಂತೃಪ್ತಿಗೆ ಪ್ರಥಮ ಆದ್ಯತೆ ನೀಡುತ್ತಿರುವ ಸಂಸ್ಥೆ ಎಂದು ಮಾಜಿ ಸಚಿವ ವಿನಯ ಕುಮಾರ್ ತಿಳಿಸಿದ್ದಾರೆ. ಅವರು ನಗರದ ಫಿಝಾ ನೆಕ್ಸ್ ಸ್ ಮಾಲ್ ನಲ್ಲಿ ಹಮ್ಮಿಕೊಂಡಿರುವ ಹರ್ಷ ಸಮೂಹದ ಹದಿನೇಳನೇ ಹಾಗೂ ಮಂಗಳೂರಿನ 3ನೆ ಮಳಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದಿವಂಗತ ಬೋಳ ಪೂಜಾರಿ ಯವರಿಂದ ಆರಂಭಗೊಂಡು ಹರ್ಷ ಮಳಿಗೆ 17ನೆ ಮಳಿಗೆಯವರೆಗೆ ವಿಸ್ತರಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರ ವಾಗಿದೆ.ಸುಮಾರು 700ಮಂದಿಗೆ ಉದ್ಯೋಗ ನೀಡಿ, ಅವರನ್ನು ಅವಲಂಬಿಸಿ ರುವ ಕುಟುಂಬಕ್ಕೆ ನೆರವು ನೀಡುವ ಮೂಲಕ ಹರ್ಷಸಂಸ್ಥೆ ಹರ್ಷ ತಂದಿದೆ.  ಸಮಾಜಕ್ಕೆ ಕೊಡುಗೆ ನೀಡಿದ್ದಾರೆ.
02:59 PM Nov 03, 2023 IST | Ashitha S
ಮಂಗಳೂರು  ಹರ್ಷ ಸಮೂಹ ಸಂಸ್ಥೆಯ 17ನೇ ಮಳಿಗೆ ಉದ್ಘಾಟಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಮಂಗಳೂರು: ಹರ್ಷ ಸಂಸ್ಥೆ ಗ್ರಾಹಕ ಸಂತೃಪ್ತಿಗೆ ಪ್ರಥಮ ಆದ್ಯತೆ ನೀಡುತ್ತಿರುವ ಸಂಸ್ಥೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ. ಅವರು ನಗರದ ಫಿಝಾ ನೆಕ್ಸ್ ಸ್ ಮಾಲ್ ನಲ್ಲಿ ಹಮ್ಮಿಕೊಂಡಿರುವ "ಹರ್ಷ ಸಮೂಹದ ಹದಿನೇಳನೇ ಹಾಗೂ ಮಂಗಳೂರಿನ 3ನೆ ಮಳಿಗೆ"ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದಿವಂಗತ ಬೋಳ ಪೂಜಾರಿ ಯವರಿಂದ ಆರಂಭಗೊಂಡು ಹರ್ಷ ಮಳಿಗೆ 17ನೆ ಮಳಿಗೆಯವರೆಗೆ ವಿಸ್ತರಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರ ವಾಗಿದೆ. ಸುಮಾರು 700ಮಂದಿಗೆ ಉದ್ಯೋಗ ನೀಡಿ, ಅವರನ್ನು ಅವಲಂಬಿಸಿ ರುವ ಕುಟುಂಬಕ್ಕೆ ನೆರವು ನೀಡುವ ಮೂಲಕ ಹರ್ಷಸಂಸ್ಥೆ ಹರ್ಷ ತಂದಿದೆ.  ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಹರ್ಷ ಸಮೂಹ ಸಂಸ್ಥೆ ಗ್ರಾಹಕರ ಜೊತೆ ನೇರ ಸಂಪರ್ಕ ಹೊಂದಿರುವ ಸಂಸ್ಥೆ ಯಾಗಿದೆ.ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರು ಹರ್ಷ ಸಮೂಹ ಸಂಸ್ಥೆ ಗಳ ನಿಕಟವರ್ತಿಯಾಗಿ ಈ ಹಿಂದಿನ ಎಲ್ಲಾ ಮಳಿಗೆಗಳ ಉದ್ಘಾಟ ನೆಯಲ್ಲಿ ಭಾಗವಹಿಸಿದ್ದರು ಎಂದು ವಿನಯ ಕುಮಾರ್ ಸೊರಕೆ ನೆನಪಿಸಿದರು.

Advertisement

ಪ್ರಕಾಶ್ ರಿಟೈಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಸೂರ್ಯ ಪ್ರಕಾಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ,1987ರಲ್ಲಿ ಉಡುಪಿಯಲ್ಲಿ ಆರಂಭವಾದ ಹರ್ಷ ಸಮೂಹದ ಸಂಸ್ಥೆ ಇಂದು ರಾಜ್ಯಾದ್ಯಂತ ವಿಸ್ತರಿಸಿದೆ.ಗ್ರಾಹಕರಿಗೆ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ದೊರೆಯುವಂತಾಗಲು ಹರ್ಷ ವಿಸ್ತೃತ ಮಳಿಗೆಗಳನ್ನು ಆರಂಭಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿ ಮಂಗಳೂರಿನಲ್ಲಿ ಮೂರನೆ ಮಳಿಗೆ ಆರಂಭಗೊಂಡಿದೆ. ಗುಣಮಟ್ಟದ ಸೇವೆ ವಿಶ್ವ ದರ್ಜೆಯ ಉತ್ಪನ್ನಗಳನ್ನು ಒಂದೇ ಕಡೆ ಗ್ರಾಹಕರಿಗೆ ದೊರೆಯುವಂತೆ ಮಾಡಿದೆ.ಮಾರಾಟ ಕೇದ್ರೀಕೃತ ವ್ಯಾಪಾರ ವ್ಯವಸ್ಥೆ ಯನ್ನು ಗ್ರಾಹಕ ಕೇಂದ್ರೀಕೃತ ವಾಗಿ ಪರಿವರ್ತಿಸಿ ಹರ್ಷ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಶಾಸಕ ವೇದವ್ಯಾಸ ಕಾಮತ್ ಸಂಸ್ಥೆ ಮಂಗಳೂರಿನ ಸ್ಮಾರ್ಟ್ ಸಿಟಿಯ ಬೆಳವಣಿಗೆಗೆ ಕೊಡುಗೆ ಯಾಗಿದೆ.ಸಂಸ್ಥೆಯ ಪ್ರಯತ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಹರ್ಷ ಸಂಸ್ಥೆ ಅಗ್ರ ಸ್ಥಾನದಲ್ಲಿದೆ ಎಂದು ಶುಭ ಹಾರೈಸಿದರು. ಶಾಸಕ ಹರೀಶ್ ಕುಮಾರ್ ಸಂಸ್ಥೆಯ ಸ್ಥಾಪಕ ಬೋಳ ಪೂಜಾರಿಯವರಿಂದ ಆರಂಭ ಗೊಂಡ ಹರ್ಷ ಸಂಸ್ಥೆಯ ಸ್ಥಾಪಕರ ಶಿಸ್ತು ಪ್ರಮಾಣಿಕತೆಯೊಂದಿಗೆ ಬೆಳೆದಿದೆ. ಅದೇ ಮಾದರಿಯನ್ನು ಅವರ ನಂತರ ಅವರ ಕುಟುಂಬದ ಸದಸ್ಯರು ಸಾಮೂಹಿಕ ಪ್ರಯತ್ನ ದ ಮೂಲಕ ಮುಂದುವರಿಸಿ ಸಂಸ್ಥೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಶುಭ ಹಾರೈಸಿದರು. ಮಾಜಿ ಶಾಸಕ ಜೆ.ಆರ್.ಲೋಬೊ ಶುಭ ಹಾರೈಸಿದರು.

ಸಮಾರಂಭದಲ್ಲಿ ಹರ್ಷ ಸಮೂಹ ಸಂಸ್ಥೆ ಯ ನಿರ್ದೇಶಕರುಗಳಾದ ಅಶೋಕ್ ಕುಮಾರ್, ಹರೀಶ್ ಕುಮಾರ್,  ಸುರೇಶ್ ,ರಾಜೇಶ್ ,ಫಿಝಾ ನೆಕ್ಸ್ ಸ್ ಮಾಲ್ ನ ಸೆಂಟರ್ ಡೈರೆಕ್ಟರ್ ಅರವಿಂದ ಶ್ರೀ ವಾತ್ಸವ್ ಮೊದಲಾದವರು ಉಪಸ್ಥಿತರಿದ್ದರು. ಸಿದ್ಧಾರ್ಥ ವಂದಿಸಿದರು.ಚೇತನ್ ಮತ್ತು ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.

Advertisement
Tags :
Advertisement