For the best experience, open
https://m.newskannada.com
on your mobile browser.
Advertisement

ಮಾ.25ರಂದು ಮಹತೋಭಾರ ಶ್ರೀ ಸೋಮನಾಥೇಶ್ವರ ಮಹಿಷಮರ್ದಿನಿ ದೇವಸ್ಥಾನದ ಶಿಲಾನ್ಯಾಸ ಸಮಾರಂಭ

ಮಂಗಳೂರು ನಗರದ ಇತಿಹಾಸ ಪ್ರಸಿದ್ಧ 'ಮಹತೋಭಾರ ಶ್ರೀ ಸೋಮನಾಥೇಶ್ವರ ಮಹಿಷಮರ್ದಿನಿ ದೇವಸ್ಥಾನ' ದೇವಂದಗುಡ್ಡೆ, ಮರಕಡ. ಸುಮಾರು 1,300 ವರ್ಷ ಇತಿಹಾಸ ಹೊಂದಿರುವ ಈ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ದೃಷ್ಠಿಕೋನದಿಂದ ಊರ ಮತ್ತು ಪರೂರ ಭಕ್ತರು ಸೇರಿ ಸಮಿತಿಯನ್ನು ಸಮಸ್ತ ಭಕ್ತರ ಸಹಕಾರದ ನೀರಿಕ್ಷೆಯಲ್ಲಿ ಪುನರ್‌ ನಿರ್ಮಾಣಗೊಳ್ಳುತ್ತಿದೆ.
04:29 PM Mar 21, 2024 IST | Ashitha S
ಮಾ 25ರಂದು ಮಹತೋಭಾರ ಶ್ರೀ ಸೋಮನಾಥೇಶ್ವರ ಮಹಿಷಮರ್ದಿನಿ ದೇವಸ್ಥಾನದ ಶಿಲಾನ್ಯಾಸ ಸಮಾರಂಭ

ಮಂಗಳೂರು: ಮಂಗಳೂರು ನಗರದ ಇತಿಹಾಸ ಪ್ರಸಿದ್ಧ "ಮಹತೋಭಾರ ಶ್ರೀ ಸೋಮನಾಥೇಶ್ವರ ಮಹಿಷಮರ್ದಿನಿ ದೇವಸ್ಥಾನ" ದೇವಂದಗುಡ್ಡೆ, ಮರಕಡ. ಸುಮಾರು 1,300 ವರ್ಷ ಇತಿಹಾಸ ಹೊಂದಿರುವ ಈ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ದೃಷ್ಠಿಕೋನದಿಂದ ಊರ ಮತ್ತು ಪರೂರ ಭಕ್ತರು ಸೇರಿ ಸಮಿತಿಯನ್ನು ಸಮಸ್ತ ಭಕ್ತರ ಸಹಕಾರದ ನೀರಿಕ್ಷೆಯಲ್ಲಿ ಪುನರ್‌ ನಿರ್ಮಾಣಗೊಳ್ಳುತ್ತಿದೆ.

Advertisement

ಇದರ ಶಿಲಾನ್ಯಾಸ ಕಾರ್ಯಕ್ರಮವು ಇದೇ ಮಾರ್ಚ್‌ 25ರಂದು ನೆರವೇರಲಿದೆ. ಶಿಲಾನ್ಯಾಸ ಸಮಾರಂಭದ ದಿವ್ಯ ಉಪಸ್ಥಿತಿಯನ್ನು ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶರೀ ಎಡನೀರು ಮಠ ಇವರು ವಹಿಸಿಕೊಳ್ಳುತ್ತಿದ್ದಾರೆ.

ಅತೀ ಪುರಾತನ ಕಾಲದಲ್ಲಿ ಯೋಗಿಗಳಿಂದ ಜಪತಪಗಳನ್ನು ಆಚರಿಸಲ್ಪಟ್ಟು ಪ್ರಾಕೃತಿಕ ಆರಾಧನೆಗಳನ್ನು ನಡೆಸಿಕೊಂಡು ಬಂದು ಈ ಪುಣ್ಯಭೂಮಿ ನಿರ್ಮಾಣಗೊಂಡಿದ್ದು, ಸುಮಾರು 1300 ವರ್ಷಗಳ ಮೊದಲು ಈ ಪ್ರದೇಶ ಕದ್ರಿ ಜೋಗಿ ಮಠದ ಅಧೀನಕ್ಕೆ ಬಂದು ಓರ್ವ ಯೋಗಿಯು ಕ್ಷೇತ್ರದ ಉತ್ತರ ಭಾಗದ ಫಲ್ಗುಣಿ ನದಿಯ ತಟದಲ್ಲಿ ಜೋಯಿಗುಡ್ಡೆಯ ಜೋಯಿಕಲ್ಲು ಎಂಬ ಸ್ಥಳದಲ್ಲಿ ವಾಸ ಮಾಡಿ ಜಪ ತಪ ಆರಾಧನೆಯನ್ನು ಮಾಡಿದ್ದರು. ಕ್ಷೇತ್ರಕ್ಕೆ ಬೋಂದೆಲ್‌ನಿಂದ ಕೃಷ್ಣನಗರಕ್ಕೆ ಸಾಗುವ ಮಾರ್ಗದಿಂದ 1.5 ಕಿ.ಮೀ. ಕ್ರಮಿಸಿ ಸಾಗಬೇಕು.

Advertisement

ಇನ್ನು ಈ ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ಸಲ್ಲಿಸುವ ಭಕ್ತಾದಿಗಳು "ಮತೋಭಾರ ಶ್ರೀ ಸೋಮನಾಥೇಶ್ವರ ಮಹಿಷಮರ್ದಿನಿ ದೇವಸ್ಥಾನ ಪುನರ್‌ ನಿರ್ಮಾಣ ಸಮಿತಿ
Account No. 6782000100011501
Account Type: Current Account
Bank Name: Karnataka Bank
Branch: Mangalure Kavoor
IFSC Code: KARB0000678

Advertisement
Tags :
Advertisement