For the best experience, open
https://m.newskannada.com
on your mobile browser.
Advertisement

ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ನಾಪತ್ತೆ

ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮೇ 14ರಂದು ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
03:55 PM May 15, 2024 IST | Chaitra Kulal
ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ನಾಪತ್ತೆ

ಉಡುಪಿ: ಶಿರ್ವ ಫೈಝುಲ್ ಇಸ್ಲಾಂ ಮದ್ರಸದ ನಾಲ್ವರು ಮಕ್ಕಳು ಮೇ 14ರಂದು ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಾಪತ್ತೆಯಾದ ವಿದ್ಯಾರ್ಥಿಗಳನ್ನು ಬಿಹಾರ ಮೂಲದ ತಬಾರಕ್, ಜಂಶೀದ್, ತಂಝೀರ್ ಆಲಮ್, ಶಾಹಿಲ್ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ.

ಮದ್ರಸ ಶಿಕ್ಷಣ ಕಲಿಯುತ್ತಿದ್ದ ಇವರು, ಮಂಗಳವಾರ ಮಧ್ಯಾಹ್ನ ವೇಳೆ ಮದ್ರಸದಿಂದ ಹೊರಗಡೆ ಹೋದವರು ಈವರೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ. ಇಲ್ಲಿಂದ ಅವರು ತಮ್ಮ ಊರಿಗೆ ಹೋಗಿರಬಹುದು ಎಂದು ಶಂಕಿಸಲಾಗಿದೆ.

Advertisement

ಈ ಬಗ್ಗೆ ಫೈಝುಲ್ ಇಸ್ಲಾಂ ಎಜುಕೇಶನ್ ಟ್ರಸ್ಟ್ ಫರ್ವೇಝ್ ಸಲೀಂ ನೀಡಿದ ದೂರನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement